

ಬೆಂಗಳೂರು: ಪರಿಸರ ಸಂರಕ್ಷಣೆಗೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಕುರಿತು 15 ದಿನಗಳೊಳಗೆ ಬಹಿರಂಗಪಡಿಸಬೇಕು ಎಂದು ಗಡುವು ನೀಡಿದ ಪ್ರತಿಭಟನಾಕಾರರು, ನಗರದ ಸ್ವಾತಂತ್ರ್ಯ ಉದ್ಯಾವನದಲ್ಲಿ ಮೂರು ದಿನಗಳಿಂದ ನಡೆಸುತ್ತಿದ್ದ ಪರಿಸರ ಸತ್ಯಾಗ್ರಹವನ್ನು ಮಂಗಳವಾರ ಕೈಬಿಟ್ಟರು.
ಸತ್ಯಾಗ್ರಹದ ಪ್ರತಿನಿಧಿ ರೈತ ಟಿ.ಜಿ.ಎಸ್. ಅವಿನಾಶ್ ಮಾತನಾಡಿ, ಪರಿಸರ ರಕ್ಷಣೆ ಬಗ್ಗೆ ಎಲ್ಲರೂ ಮಾತನಾಡುತ್ತಾರೆ ಹೊರತು ಕ್ರಮಕ್ಕೆ ಮುಂದಾಗುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳು ನಿಸರ್ಗದ ಮೇಲೆ ಪರಿಣಾಮ ಬೀರುತ್ತಿದೆ. ಮುಂದಿನ ಪೀಳಿಗೆಯ ಉಳಿವಿಗಾಗಿ ಪರಿಸರ ಬಿಕ್ಕಟ್ಟುಗಳನ್ನು ತಡೆಗಟ್ಟಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾ ಯೋಜನೆಗಳಲ್ಲಿ ರಾಷ್ಟ್ರೀಯ ಮಿಷನ್ ಅಡಿಯಲ್ಲಿ ಣಿಸುತ್ತಿರುವ ಅರಣ್ಯ ಪ್ರದೇಶವನ್ನು ರಸುವುದು ಎಂದು ಪ್ರಸ್ತಾಪಿಸಿದೆ. 2014ರಲ್ಲಿ ಪ್ರಾರಂಭಗೊಂಡ ಯೋಜನೆಯು 10 ವರ್ಷಗಳಲ್ಲಿ ಅರಣ್ಯ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶವನ್ನು ಬಹಿರಂಗಪಡಿಸಿತ್ತು. ಆದರೆ ಎಲ್ಲಿ ಅಭಿವೃದ್ಧಿಯಾಗಿದೆ ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ಮಹೀಮಾ ಪಾಟೀಲ್, ವಿವಿಧ ಸಂಟನೆಗಳ ಮುಖಂಡರಾದ ಬಡಗಲಪುರ ನಾಗೇಂದ್ರ, ಆಂಜನೇಯ ರೆಡ್ಡಿ, ಎಸ್.ಆರ್.ಹಿರೇಮಠ್, ಅಖಿಲೇಶ್ ಚಿಪ್ಪಹಳ್ಳಿ, ಸತೀಶ್ ಉಪಸ್ಥಿರಿದ್ದರು.
ಪರಸರ ಸಂಕ್ಷರಣೆಗೆ ಸರ್ಕಾರ ಬದ್ಧ
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿಗೆ ಸ್ಪಂದಿಸಿದ ಸಚಿವ ಲಕ್ಷ$್ಮಣ ಸವದಿ, ಪರಿಸರ ಎಲ್ಲರಿಗೂ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸವಲತ್ತು. ಇದರ ಸಂರಕ್ಷಣೆಗಾಗಿ ಸರ್ಕಾರ ಬದ್ಧವಾಗಿದ್ದು, ಸದನದಲ್ಲಿ ಧ್ವನಿ ಎತ್ತುವುದರ ಜತೆಗೆ ಸಿಎಂ ಜತೆ ಚರ್ಚಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.