ವಿಧಾನ ಪರಿಷತ್​ ಚುನಾವಣೆಗೆ ಬಿಜೆಪಿ ಟಿಕೆಟ್​ ಘೋಷಣೆ: ಅಧಿಕೃತ ಪಟ್ಟಿ ಇಲ್ಲಿದೆ...

BJP Ticket
Published on

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆಗೆ ' ಗಜಗರ್ಭ ಪ್ರಸವ' ದಂತೆ ಆಡಳಿತ ಬಿಜೆಪಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ( ಲಿಂಗಾಯತ-ಗಾಣಿಗ), ಪಕ್ಷದ ರಾಜ್ಯ ಕಾರ್ಯದರ್ಶಿ ಕೇಶವ ಪ್ರಸಾದ್ ( ನೇಕಾರ- ಇತರ ಹಿಂದುಳಿದ ವರ್ಗ), ಪಕ್ಷದ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ( ಪರಿಶಿಷ್ಟ ಜಾತಿ-ಬಲ) ಹಾಗೂ ಹೇಮಲತಾ ನಾಯಕ್ ಹೆಸರುಗಳು ಅಂತಿಮವಾಗಿವೆ.

ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಸವರಾಜ ಹೊರಟ್ಟಿ ಹೆಸರು ಪ್ರಕಟಿಸಲಾಗಿದೆ

ಈ ಮುಂಚೆಯೇ ಹೊರ ಬಿದ್ದ ಸುಳಿವಿನಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ, ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಸರು ಕೈಬಿಟ್ಟಿರುವುದು ದೃಢಪಟ್ಟಿದ್ದು, ಪಕ್ಷದೊಳಗೆ ಕುದಿಮೌನ ಆವರಿಸಿದೆ.

ದೊಡ್ಡ ಸಂಖ್ಯೆಯಲ್ಲಿ ಆಕಾಂಕ್ಷಿಗಳು, ಜಾತಿ- ವರ್ಗಗಳ ಪ್ರಾತಿನಿಧ್ಯ ನಿಭಾಯಿಸಬೇಕಾದ ಒತ್ತಡಕ್ಕೆ ಸಿಲುಕಿದ್ದ ಪಕ್ಷದ ವರಿಷ್ಠರು ಸಾಕಷ್ಟು ಕಸರತ್ತು ನಡೆಸಿ, ಸೋಮವಾರ ತಡರಾತ್ರಿ ಅಂತಿಮಗೊಳಿಸಿದೆ. ಆದರೂ ನಿರ್ಣಯದ ವ್ಯತಿರಿಕ್ತ ಪರಿಣಾಮಗಳನ್ನು ತಡೆಯಲೆಂದು ನಾಮಪತ್ರ ಸಲ್ಲಿಕೆ ಕೊನೇ ದಿನದವರೆಗೂ ಗೌಪ್ಯತೆ ಕಾಯ್ದುಕೊಂಡಿತು ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net