

ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಇದೇ ಡಿ.1ರಂದು ನಂದಿನಿ ಲೇಔಟ್ನಲ್ಲಿ ಬೆಂಗಳೂರು ಉತ್ಸವ ( Bengaluru Utsava ) ಆಯೋಜಿಸಿದೆ. ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಮಾಹಿತಿ- ಮನರಂಜನೆ - ಸಾಂಸ್ಕೃತಿಕ ಹಿರಿಮೆ ಸಾರುವ ವಿನೂತನ ಪರಿಕಲ್ಪನೆಯೇ ಬೆಂಗಳೂರು ಉತ್ಸವ. ಇದು ನಮ್ಮ ಏರಿಯಾದ ಬೀದಿಗಳಲ್ಲಿ ನಡೆಯುವ ನಮ್ಮ ಹಬ್ಬ. ಬಿಬಿಎಂಪಿ, ಪೊಲೀಸ್ ಇಲಾಖೆ ಸಹಕಾರದೊಂದಿಗೆ ನಡೆಯುವ ಉತ್ಸವದಲ್ಲಿ ಸ್ಯಾಂಡಲ್ವುಡ್ ಹಾಗೂ ಕಿರುತೆರೆಯ ನಟ-ನಟಿಯರು ಪಾಲ್ಗೊಳ್ಳಲಿದ್ದಾರೆ.
ಮನರಂಜನೆಯೊಂದಿಗೆ ಸಾಂಸ್ಕೃತಿಕ ಹಿರಿಮೆ ಗರಿಮೆ ಸಾರುವ ವಿನೂತನ ಪರಿಕಲ್ಪನೆಯೊಂದಿಗೆ ಕನ್ನಡದ ನಂ.1. ದಿನಪತ್ರಿಕೆ ವಿಜಯವಾಣಿ ‘ಬೆಂಗಳೂರು ಉತ್ಸವ’ ಆಯೋಜಿಸುತ್ತಿದ್ದು, ಮನ ದಣಿಯೆ ಆಟ ಆಡಿ, ಮಸ್ತ್ ಮಜಾ ಮಾಡಬಹುದಾಗಿದೆ.
ಡಿ.1ರಂದು ನಂದಿನಿ ಲೇಔಟ್ನ ನವರಾತ್ರಿ ವೃತ್ತದ ಬಳಿಯ ದುರ್ಗಾಪರಮೇಶ್ವರಿ ದೇವ ಸ್ಥಾನದ ಬಳಿ ‘ನಮ್ಮ ಬೀದಿ ನಮ್ಮ ಉತ್ಸವ’ ಶೀರ್ಷಿಕೆಯಡಿ ‘ಬೆಂಗಳೂರು ಉತ್ಸವ’ಕ್ಕೆ ವೇದಿಕೆ ಸಜ್ಜಾಗು ತ್ತಿದೆ. ವಿಜಯಾನಂದ ಟ್ರಾವೆಲ್ಸ್, ಐಶ್ವರ್ಯ ಟೀ ಇಂಡಸ್ಟ್ರೀಸ್, ಬೆನಕ ಗೋಲ್ಡ್, ಶರಣ್ಯಾ ಫಾಮ್್ಸರ್ ನಂದಿನಿ ಪ್ರಯೋಜಕತ್ವದಲ್ಲಿ ಉತ್ಸವ ನಡೆಯಲಿದ್ದು, ಮಾಜಿ ಸಚಿವ ಕೆ. ಗೋಪಾಲಯ್ಯ, ಪಾಲಿಕೆ ಮಾಜಿ ಸದಸ್ಯ ಕೆ.ವಿ. ರಾಜೇಂದ್ರಕುಮಾರ್, ನಟ ವಿರಾಟ್, ನಟಿಯರಾದ ಸಂಗೀತಾ ಭಟ್, ಸಂಜನಾ ಆನಂದ್ ಸೇರಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ‘ನಮ್ಮೋರು ನಮ್ ಏರಿಯಾದವರ ಜತೆ ಸಂಭ್ರಮಿಸುವ ಸಾಂಸ್ಕೃತಿಕ ಹಬ್ಬ’ ಇದಾಗಿದ್ದು, ಬೆಳಗ್ಗೆ 7 ರಿಂದ 11.30ರವರೆಗೆ ಉತ್ಸವ ನಡೆಯಲಿದೆ.
ಏನೆಲ್ಲ ಇರಲಿದೆ?
ಯೋಗ, ಜುಂಬಾ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಬುಲೆಟ್ ರ್ಯಾಲಿ, ಅಪ್ಪಟ ಕನ್ನಡದಲ್ಲಿ ಒಂದು ನಿಮಿಷದ ಮಾತು, ನೃತ್ಯ, ಬೀಟ್ ಬಾಕ್ಸಿಂಗ್ ಮತ್ತು ಡಿಜೆ, ಜಾನಪದ ತಂಡಗಳಿಂದ ಕಲಾ ಪ್ರದರ್ಶನ, ಜಾದು ಪ್ರದರ್ಶನ, ಗಾಯನ, ವ್ಯಂಗ್ಯಚಿತ್ರ ಮತ್ತು ಕುಂಬಾರಿಕೆ, ಸಾಮಾನ್ಯ ಜ್ಞಾನ ಸ್ಪರ್ಧೆ, ಮಂದಗತಿಯ ಸೈಕಲ್ ಚಾಲನೆ, ಚಮಚ ಮತ್ತು ನಿಂಬೆಹಣ್ಣು ಸ್ಪರ್ಧೆ, ಗಿಲ್ಲಿ ದಾಂಡು, ಕುಂಟಾಬಿಲ್ಲೆ, ಕೇರಂ, ಬುಗುರಿ, ಚದುರಂಗ ಸ್ಪರ್ಧೆ, ಬ್ಯಾಡ್ಮಿಂಟನ್, ಛದ್ಮವೇಷ ಸ್ಪರ್ಧೆ, ಹಗ್ಗಜಗ್ಗಾಟ ಸ್ಪರ್ಧೆ, ಲಗೋರಿ ಸೇರಿ ಎಲ್ಲ ವಯೋಮಾನದವರಿಗೂ ಆಟಗಳು ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ವಿವರಗಳಿಗೆ ಮೊ: 7411041035/8660038783/ 8884431902 ಸಂರ್ಪಸಬಹುದು.