ಮಾರ್ಚ್​ 15 ರಂದು ಬೆಂಗಳೂರು ವಿಶ್ವವಿದ್ಯಾಲಯ ಬಂದ್!

bengaluru university
bengaluru university
Published on

ಬೆಂಗಳೂರು: ಜ್ಞಾನಭಾರತಿಯಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಪಿಎಚ್.ಡಿ ಪ್ರವೇಶ ಪ್ರಕ್ರಿಯೆಯಲ್ಲಿ ವಿಶ್ವವಿದ್ಯಾಲಯದ ಧನ ಸಹಾಯ ಆಯೋಗದ(ಯುಜಿಸಿ) ನಿಯಮಗಳನ್ನು ಉಲ್ಲಂಸಿದೆ ಎಂದು ಆರೋಪಿಸಿ ಬೆಂ.ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಮಾ.15 ಬಂದ್ ನಡೆಸಲು ನಿರ್ಧರಿಸಿದೆ.

ಬೆಂ.ವಿವಿ ಮೂರು ವರ್ಷಗಳ ನಂತರ ಪಿಎಚ್.ಡಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿ ಪರೀಕ್ಷೆ ನಡೆಸಿ ಮೊದಲ ಸುತ್ತಿನ ಕೌನ್ಸೆಲಿಂಗ್ ಮುಗಿಸಿದೆ. ಮಾ.17ರಿಂದ ಎರಡನೇ ಸುತ್ತಿನ ಕೌನ್ಸೆಲಿಂಗ್ ನಡೆಸಲು ನಿರ್ಧರಿಸಿದೆ.

ಆದರೆ, ವಿವಿಯು ಪಿಎಚ್.ಡಿ ಪ್ರವೇಶ ಪರೀಕ್ಷೆ ನಡೆಸುವ ವೇಳೆಯೇ ಸ್ನಾತಕೋತ್ತರ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯುವ ಅವಕಾಶ ನೀಡುವ ಜತೆಗೆ ಅಂತಿಮ ವರ್ಷದವರಿಗೂ ಅವಕಾಶ ನೀಡಿತ್ತು. ಇದು ಯುಜಿಸಿ ನಿಯಮದ ವಿರುದ್ಧವಾಗಿದೆ ಎಂದು ಆರೋಪಿಸಲಾಗಿದೆ.

ಅಲ್ಲದೆ, ಅರ್ಹತಾ ಮಾನದಂಡದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಅಂಕಗಳಲ್ಲಿ ಸಡಿಲಿಕೆ ಮಾಡಬೇಕಿತ್ತು. ಆದರೆ, ಬೆಂ.ವಿವಿ ಕುಲಪತಿ ಇದ್ಯಾವುದನ್ನು ಲೆಕ್ಕಿಸಿದೆಯೇ ಪ್ರವೇಶ ಪ್ರಕ್ರಿಯೆ ನಡೆಸುತ್ತಿದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ಕಂಡಿಲ್ಲ. ಇದರಿಂದಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಒಕ್ಕೂಟದ ಮುಖ್ಯಸ್ಥ ಜಿ.ಗೋಪಾಲ್ ತಿಳಿಸಿದ್ದಾರೆ.

* ಪ್ರಮುಖ ಬೇಡಿಕೆಗಳು

- ಪಿಎಚ್.ಡಿಗೆ ಯುಜಿಸಿ ನಿಯಮ ಪಾಲಿಸಬೇಕು

- ಸೀಟುಗಳ ಸಂಖ್ಯೆ ಹೆಚ್ಚಿಸಬೇಕು

- ಪ.ಜಾ, ಪ.ಪಂ, ಹಿಂದುಳಿದವರಿಗೆ ಅವಕಾಶ ನೀಡಬೇಕು

- 2ನೇ ಸುತ್ತಿನ ಕೌನ್ಸೆಲಿಂಗ್ ಮುಂದೂಡಬೇಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net