ತಮಿಳು ಚಿತ್ರ ನಟ ಇಳಯದಳಪತಿ ವಿಜಯ್ ಕಾರ್‌ಗೆ ದಂಡ..!

Vijay
Published on

ಬೆಂಗಳೂರು : ತಮಿಳು ಚಿತ್ರ ನಟ ವಿಜಯ್ ಕಾರಿಗೆ ಕೆ.ಆರ್.ಪುರ ಸಂಚಾರ ಠಾಣೆ ಪೊಲೀಸರು ದಂಡ ವಿಧಿಸಿದ್ದಾರೆ. ಆದರೆ, ಕಾರನ್ನು ಈ ಹಿಂದೆಯೇ ವಕೀಲರಿಗೆ ಮಾರಾಟ ಮಾಡಿದ್ದ ವಿಚಾರ ಗೊತ್ತಾಗಿದೆ.

ಸಾಮಾನ್ಯವಾಗಿ ಐಷಾರಾಮಿ ಕಾರುಗಳ ಕಿಟಕಿಗಳಿಗೆ ಟಿಂಟೆಡ್ ಗ್ಲಾಸ್ ಅಳವಡಿಸಿಕೊಂಡು ಸಂಚರಿಸುತ್ತಾರೆ. ಇದು ಸಹ ಸಂಚಾರ ನಿಯಮ ಉಲ್ಲಂಘನೆ ಆಗುತ್ತದೆ. ಆದರೆ, ನಟ ವಿಜಯ್ ಬಳಿ ಕಾರು ಖರೀದಿಸಿದ್ದ ತಮಿಳುನಾಡಿನ ವಕೀಲ ಅನೀಶ್, ಕಾರಿನ ಮುಂಭಾಗದ ಗಾಜಿಗೂ ಟಿಂಟೆಡ್ ಗ್ಲಾಸ್ ಅಳವಡಿಸಿಕೊಂಡು ಸಂಚರಿಸುತ್ತಿದ್ದರು.

ಕೆ.ಆರ್.ಪುರ ರೈಲು ನಿಲ್ದಾಣದ ಬಳಿ ಶುಕ್ರವಾರ ಕರ್ತವ್ಯ ನಿರ್ವಹಿಸುತ್ತಿದ್ದ ಇನ್‌ಸ್ಪೆಕ್ಟರ್ ಎಂ.ಎ. ಮಹಮ್ಮದ್, ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಟಿಂಟೆಡ್ ಗ್ಲಾಸ್ ದೃಢವಾಗಿದೆ. ಕಾರಿನ ಮಾಲೀಕ ಕುರಿತು ಪರಿಶೀಲನೆ ನಡೆಸಿದಾಗ ಅದು ನಟ ವಿಜಯ್‌ಗೆ ಸೇರಿದ್ದ ಕಾರು ಆಗಿತ್ತು.

ಇತ್ತೀಚಿಗಷ್ಟೇ ನಟ ವಿಜಯ್ ಅವರಿಂದ ವಕೀಲ ಅನೀಶ್ ಖರೀದಿ ಮಾಡಿದ್ದರು. ಟಿಂಟೆಡ್ ಗ್ಲಾಸ್ ತೆಗೆಸದೆ ಚಲಾಯಿಸುತ್ತಿದ್ದರು. ಸಂಚಾರ ನಿಯಮದಲ್ಲಿ ಟಿಂಟೆಡ್ ಗ್ಲಾಸ್ ಕಾನೂನು ಬಾಹಿರವಾಗಿದೆ. ಈ ನಿಯಮವನ್ನು ಬೆಂಗಳೂರು ಸಂಚಾರ ಪೊಲೀಸರು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net