ಬೆಂಗಳೂರು ಟ್ರಾಫಿಕ್​ ಪೊಲೀಸರಿಗೆ ಹರಿದು ಬಂತು ಹಣದ ಹೊಳೆ! ಒಂದೇ ವಾರದಲ್ಲಿ ಎಷ್ಟು ದಂಡ ಸಂಗ್ರಹಿಸಿದ್ದಾರೆ ಗೊತ್ತಾ?

traffic
Published on

ಬೆಂಗಳೂರು: ಬೆಂಗಳೂರು ಟ್ರಾಫಿಕ್​ ಪೊಲೀಸರಿಗೆ ನವೆಂಬರ್​ ಕೊನೆಯ ವಾರದಲ್ಲಿ ಹಣದ ಹೊಳೆಯೇ ಹರಿದು ಬಂದಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 3 ಕೋಟಿ ರೂಪಾಯಿಗೂ ಅಧಿಕ ಮೊತ್ತದ ದಂಡವನ್ನು ಕೇವಲ ಒಂದು ವಾರದಲ್ಲಿ ಸಂಗ್ರಹಿಸಲಾಗಿದೆ.

ನವೆಂಬರ್​ 23ರಿಂದ 29ರವರೆರಗೆ ಬರೋಬ್ಬರಿ 79,359 ಪ್ರಕರಣಗಳನ್ನು ಬೆಂಗಳೂರು ಟ್ರಾಫಿಕ್​ ಪೊಲೀಸರು ದಾಖಲಿಸಿದ್ದಾರೆ. ಹೆಲ್ಮೆಟ್​ ಧರಿಸದ 26,118 ಪ್ರಕರಣ, ಸಿಗ್ನಲ್​ ಜಂಪ್​ ಮಾಡಿರುವ ಬಗ್ಗೆ 8,635 ಪ್ರಕರಣ ಮತ್ತು ನೋ ಎಂಟ್ರಿಯಲ್ಲಿ ಗಾಡಿ ನುಗ್ಗಿಸಿದವರ ಬಗ್ಗೆ 3,877 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಟ್ರಾಫಿಕ್​ ಪೊಲೀಸ್​ ಇಲಾಖೆಯು ಅಧಿಕೃತ ದಾಖಲೆ ಬಿಡುಗಡೆ ಮಾಡಿದ್ದು, ವಾರದಲ್ಲಿ 3 ಕೋಟಿಯ 34 ಲಕ್ಷದ 89 ಸಾವಿರದ 300 ರೂಪಾಯಿ (3,34,89,300) ದಂಡ ಸಂಗ್ರಹ ಮಾಡಿರುವುದಾಗಿ ತಿಳಿಸಿದೆ.

ಬೆಂಗಳೂರು ಟ್ರಾಫಿಕ್​ ಪೊಲೀಸ್​, ದಂಡ, Bangalore Traffic Police,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net