ದೇವಸ್ಥಾನದ ಮುಂದೆ ಜನಜಾತ್ರೆ: ಕೋವಿಡ್ ನಿಯಮ‌ ಉಲ್ಲಂಘಿಸಿದ ಅರ್ಚಕರ ವಿರುದ್ಧ ಪ್ರಕರಣ ದಾಖಲು

Vijayapura
Published on

ಬೆಂಗಳೂರು: ಕರೊನಾ ನಿಯಮ‌ ಉಲ್ಲಂಘಿಸಿದ ಅರ್ಚಕರ ವಿರುದ್ಧ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಮಂಗಳವಾರ ಕೋವಿಡ್ ನಿಯಮ ಉಲ್ಲಂಘಿಸಿ, ವಿಜಯಪುರದ ಬೆಸ್ತರ ಪೇಟೆಯಲ್ಲಿರುವ ಗಂಗಮ್ಮ ದೇವಸ್ಥಾನದ ಮುಂದೆ ಜನಜಾತ್ರೆ ಸೇರಿತ್ತು, ಕರೊನಾ ನಿಯಮಗಳನ್ನು ಗಾಳಿಗೆ ತೂರಿ ದೀಪಗಳ ಆರಾಧನೆಯಲ್ಲಿ ನೂರಾರು ಮಂದಿ ತೊಡಗಿದ್ದರು. ಈ ಬಗ್ಗೆ ದಿಗ್ವಿಜಯ ನ್ಯೂಸ್​ನಲ್ಲಿ ವರದಿ ಪ್ರಸಾರವಾಗಿತ್ತು,

ದೇವಸ್ಥಾನದ ಬಾಗಿಲನ್ನು ತೆರೆಯದೆ, ದೇವಸ್ಥಾನದ ಮುಂಭಾಗದಲ್ಲಿರುವ ಗೇಟ್ ಹಾಗೂ ಕಲ್ಲಿಗೆ ಪೂಜೆಗಳನ್ನು ಮಾಡುತ್ತಿದ್ದ ಬಗ್ಗೆ ವರದಿ ಪ್ರಸಾರವಾಗಿತ್ತು, ಈ ಹಿನ್ನಲೆ ದೇವಸ್ಥಾನದ ಅರ್ಚಕರಾದ ಗಂಗಾಧರ ಎಂಬುವವರು ಸೇರಿದಂತೆ 20 ರಿಂದ 25 ಜನರ ಮೇಲೆ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net