

ಬೆಂಗಳೂರು: ರಾಜಧಾನಿಯಲ್ಲಿ ಖಾಕಿ ತುಪಾಕಿ ಬೆಳ್ಳಂ ಬೆಳ್ಳಗ್ಗೆ ಸದ್ದು ಮಾಡಿದೆ. ರೌಡಿ ಶೀಟರ್ ಸೀನ ಅಲಿಯಾಸ್ ಸೀಗಡಿ ಸೀನನಿಗೆ ಗುಂಡೇಟು ಹೊಡೆದು ನೆಲಕ್ಕೆ ಕೆಡವಿದ್ದಾರೆ.
ರಾಜಗೋಪಾಲನಗರ ಠಾಣೆಯಲ್ಲಿ ಸೀನಾ ರೌಡಿ ಶೀಟರ್ ಪಟ್ಟಿಯಲ್ಲಿದ್ದ. ಪ್ರಕರಣವೊಂದರ ಸಂಬಂದ ಬಂಧಿಸಲು ತೆರಳಿದಾಗ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಸೀನನಿಗೆ ಗುಂಡು ಹಾರಿಸಿದ್ದಾರೆ ಪೊಲೀಸರು.
ಆತ್ಮರಕ್ಷಣೆಗಾಗಿ ರಾಜಗೋಪಾಲನಗರ ಇನ್ಸ್ಪೆಕ್ಟರ್ ದಿನೇಶ್ ಪಾಟೀಲ್ ರಿಂದ ಗುಂಡು ಹಾರಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬಂಧಿಸಲು ರಾಜಗೋಪಾಲನಗರ ಇನ್ಸ್ಪೆಕ್ಟರ್ ದಿನೇಶ್ ಪಾಟೀಲ್ ಮತ್ತು ಸಿಬ್ಬಂದಿ ತೆರಳಿದ್ದರು.
ಈ ವೇಳೆ ಚಾಕುವಿನಿಂದ ಹಲ್ಲೆ ಮಾಡಲು ರೌಡಿ ಶೀಟರ್ ಸೀಗಡಿ ಸೀನ ಮುಂದಾಗಿದ್ದಾನೆ. ಪೇದೆ ವೀರಭದ್ರಪ್ಪನಿಗೆ ತಿವಿದು ಹಲ್ಲೆಗೆ ಯತ್ನ ನಡೆಸಿದ್ದಾನೆ. ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡು ಹೊಡೆದು ಸೀನನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಗೋಪಾಲನಗರದಲ್ಲಿ 11 ಆಟೋ ಹಾಗೂ 4 ಕಾರಿನ ಗಾಜು ಹೊಡೆದು ಹಾಕಿದ್ದ ಸೀನ ಹಾಗೂ ಸಹಚರರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಬಂಧಿಸಲು ತೆರಳಿದ್ದಾಗ ಸೀನ ಹಲ್ಲೆ ನಡೆಸಿದ್ದಾನೆ, ಪೇದೆ ಗಾಯಗೊಂಡಿದ್ದಾರೆ.