ವಿಕೇಂಡ್ ಕರ್ಫ್ಯೂ ಬಗ್ಗೆ ಬೆಂಗಳೂರು ಜನರಿಗೆ ಪೊಲೀಸ್ ಕಮೀಷನರ್ ಎಚ್ಚರಿಕೆ

kamal panth
Published on

ಬೆಂಗಳೂರು: ಇಂದಿನಿಂದ ಕಟ್ಟು ನಿಟ್ಟಾಗಿ ವಿಕೇಂಡ್ ಕರ್ಫ್ಯೂ ಜಾರಿಯಾಗುತ್ತದೆ. ಅನಗತ್ಯವಾಗಿ ಓಡಾಟಕ್ಕೆ ಅವಕಾಶ ಇರುವುದಿಲ್ಲ. ನಿಯಮ ಉಲ್ಲಂಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟ್ಟು ನಿಟ್ಟಾಗಿ ವಿಕೇಂಡ್ ಕರ್ಫ್ಯೂ ಜಾರಿಯಾಗುತ್ತಿದೆ. ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಅದೇಶ ಯಥಾವತ್ತು ಜಾರಿಯಾಗುತ್ತೆ. ಅದೇಶದಲ್ಲಿ ಸೂಚಿಸಿರುವ ಸೇವೆಗಳು ಮಾತ್ರ ಲಭ್ಯವಿರುತ್ತೆ. ಮದುವೆಗಳಿಗೆ ಅವಕಾಶ ಇದ್ದರೂ ಮದುವೆ ಕಾರ್ಡ್ ಹಿಡಿದುಕೊಂಡು ಊರೆಲ್ಲ ಸುತ್ತುವಂತಿಲ್ಲ ಎಂದರು. ಸಾಧ್ಯವಾದರೆ ಇಂದೇ ಮದುವೆ ಜಾಗವನ್ನ ತಲುಪಿ. ಸೋಮವಾರ ವಾಪಸ್ಸು ಬನ್ನಿ ಎಂದು ಸಲಹೆ ನೀಡಿದ್ದಾರೆ.

ಕಳೆದ ಬಾರಿ ಕೆಲವರು ಸುಳ್ಳು ಪಾಸ್ ಪಡೆದು ತಿರುಗಾಡಿದ್ದರು. ಕೆಲವರು ಫುಡ್ ಡೆಲವರಿ ಬಾಯ್ ವೇಷದಲ್ಲಿ ತಿರುಗಾಡಲು ಪ್ರಯತ್ನಿಸುತ್ತಾರೆ. ಇಂತಹವರನ್ನ ಯಾವುದೇ ಮುಲಾಜಿಲ್ಲದೆ ಬಂಧನ ಮಾಡಲಾಗುತ್ತೆ. ವಿಕೇಂಡ್ ಕರ್ಪ್ಯೂ ವೇಳೆ ಅಗತ್ಯ ಸೇವೆಗಳು ಬಿಟ್ಟು ಬೇರೆ ಯಾವುದಕ್ಕೂ ಅವಕಾಶ ಇಲ್ಲ ಎಂದು ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net