ಕಸದ ತೊಟ್ಟಿಯಾಗಿ ಮಾರ್ಪಾಡಾದ ಉದ್ಯಾನವನ: ಮಳೆ ಬಂದಾಗ ಕಸ ಕೊಳೆತು ದುರ್ವಾಸನೆ

1172287
Published on

ಬೆಂಗಳೂರು: ಗುತ್ತಿಗೆದಾರರು ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಉದ್ಯಾನವನ ಕಸದ ತೊಟ್ಟಿಯಾಗಿ ಮಾರ್ಪಾಡಾಗಿದೆ. ಅಭಿವೃದ್ದಿಯ ಹೆಸರಿನಲ್ಲಿ ಕಳಪೆ ಕಾಮಗಾರಿ ಮಾಡಿರುವ ಪರಿಣಾಮ ಉದ್ಯಾನವನಕ್ಕೆ ಈ ದುಸ್ಥಿತಿ ಒದಗಿಬಂದಿದೆ.

ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಗೇರಿ ಉಪನಗರದ 3 ಮತ್ತು 4 ನೇ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಉದ್ಯಾನವನ ಇದೀಗ ಗಬ್ಬು ನಾರುತ್ತಿದೆ. ಹಳೆಯ ಕಲ್ಲು ಬಳಸಿ, ಬಣ್ಣ ಬಳಿದು ನಡಿಗೆ ಪಥ ನಿರ್ಮಾಣ ಮಾಡಲಾಗಿದೆ. ಉದ್ಯಾನವನದ ಸುತ್ತ ಕಾಮಗಾರಿಯೂ ವಿಳಂಬವಾಗಿದ್ದು, ಸ್ವಚ್ಛತೆಯಿಲ್ಲದೆ ಸೊಳ್ಳೆಗಳ ಆವಾಸ ಸ್ಥಾನವಾಗಿದೆ.

ಉದ್ಯಾನವನದಲ್ಲಿ ಕಸದ ರಾಶಿ ಇದ್ದು, ಮಳೆ ಬಂದಾಗ ಕಸ ಕೊಳೆತು ದುರ್ವಾಸನೆ ಬೀರುತ್ತಿದೆ. ಇದರಿಂದ ವಾಯುವಿಹಾರಕ್ಕೆ ಬರುವ ನಾಗರಿಕರಿಗೂ ತೊಂದರೆ ಆಗುತ್ತಿದೆ. ಉದ್ಯಾನವನದ ಅಕ್ಕಪಕ್ಕದ ರಸ್ತೆಯಲ್ಲಿ ಓಡಾಡುವುದೇ ದುಸ್ಸಾಹಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net