ಅಮೂಲ್ಯ, ಆರ್ದ್ರಾ ಒಟ್ಟಿಗೆ ವಾಸ?

Amuly
Published on

ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿ ದೇಶದ್ರೋಹ ಆರೋಪ ಎದುರಿಸುತ್ತಿರುವ ಅಮೂಲ್ಯ ಲಿಯೋನ್​ಳನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕಿದ್ದು, ಇತ್ತೀಚೆಗೆ ಬಂಧನಕ್ಕೊಳಪಟ್ಟ ಆರ್ದ್ರಾ ಮತ್ತು ಈಕೆ ಇಬ್ಬರೂ ಈ ಹಿಂದೆ ಬಾಡಿಗೆ ರೂಂನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ.

ಅಮೂಲ್ಯಳನ್ನು ನ್ಯಾಯಾಂಗ ಬಂಧನ ದಿಂದ ಪೊಲೀಸ್ ವಶಕ್ಕೆ ಪಡೆಯಲಾಗಿದ್ದು, ಬಿಗಿ ಭದ್ರತೆಯಲ್ಲಿ ಬಸವೇಶ್ವರನಗರ ಠಾಣೆಯಲ್ಲಿ ಚಿಕ್ಕಪೇಟೆ ಎಸಿಪಿ ಮಹಾಂತ ರೆಡ್ಡಿ ನೇತೃತ್ವದ ತಂಡ ಬುಧವಾರ ವಿಚಾರಣೆ ನಡೆಸಿದೆ. ಸ್ಥಳಕ್ಕೆ ಈ ಪ್ರಕರಣ ಸಂಬಂಧ ವ್ಯಕ್ತಿಗಳಿಗೆ ಮಾತ್ರ ಪ್ರವೇಶವಿದೆ.

ಈ ಹಿಂದೆ ಸಿ.ವಿ. ರಾಮನ್ ನಗರದಲ್ಲಿ ಅಮೂಲ್ಯ ವಾಸಿಸುತ್ತಿದ್ದ ರೂಂ ಬಳಿಗೆ ಪೊಲೀಸರು ಈಕೆಯನ್ನು ಕರೆದೊಯ್ದು ಪರಿಶೀಲನೆ ನಡೆಸಿದ್ದಾರೆ ದೇಶದ್ರೋಹ ಆರೋಪದಡಿ ಟೌನ್​ಹಾಲ್ ಬಳಿ ಬಂಧನಕ್ಕೊಳಗಾದ ಆರ್ದ್ರಾ ಜತೆ ಅಮೂಲ್ಯ ಈ ರೂಂನಲ್ಲಿ ಬಾಡಿಗೆ ಇದ್ದಳು. ನಂತರ ಆರ್ದ್ರಾ ಪಿಜಿಗೆ ಹೋಗಿದ್ದಳು ಎನ್ನಲಾಗಿದೆ. ಅಮೂಲ್ಯ ಕೆಲವೊಂದು ಪ್ರಶ್ನೆಗಳಿಗೆ ತಲೆಕೆಳಗಾಗಿಸಿ ಮೌನಕ್ಕೆ ಜಾರಿದ್ದಾಳೆ. ಆದರೆ, ಗೌರಿ ಲಂಕೇಶ್ ಹೆಸರು ಹೇಳುತ್ತಿದ್ದಂತೆ ಅಮೂಲ್ಯ ಕಣ್ಣೀರಿಟ್ಟಿದ್ದು, ಕೊನೆಗೆ ತನಿಖಾಧಿಕಾರಿಗಳು ನೀರು ಕೊಟ್ಟು ಸಮಾಧಾನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರತಿ ಹೇಳಿಕೆಯನ್ನು ತನಿಖಾಧಿಕಾರಿಗಳು ವಿಡಿಯೋ ರೆಕಾರ್ಡಿಂಗ್ ಮಾಡಿಸಲು ಮುಂದಾಗಿದ್ದಾರೆ. ಆರೋಪಿಗಳು ಸಿಎಎ, ಎನ್​ಆರ್​ಸಿ ಸೇರಿ ಕೆಲ ವಿಚಾರಗಳ ವಿರುದ್ಧ ಪ್ರತಿಭಟನೆಯ ರೂಪುರೇಷೆ ಹೇಗಿರಬೇಕೆಂದು ಗ್ರೂಪ್ ರಚಿಸಿ ರ್ಚಚಿ ಸುತ್ತಿದ್ದರೆಂದು ಮೇಲ್ನೋಟಕ್ಕೆ ಕಂಡು ಬಂದಿದೆ.

ತಪ್ಪೊಪ್ಪಿಕೊಂಡ ವಿದ್ಯಾರ್ಥಿಗಳು?

ಹುಬ್ಬಳ್ಳಿ: ‘ಪಾಕ್ ಪರ ಘೊಷಣೆ ಕೂಗಿದ್ದು ನಿಜ’ ಎಂದು ಕಾಶ್ಮೀರಿ ಮೂಲದ ಹುಬ್ಬಳ್ಳಿಯ ಇಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬೆಳಗಾವಿ ಹಿಂಡಲಗಾ ಸೆಂಟ್ರಲ್ ಜೈಲು ಸೇರಿದ ಬಾಸಿತ್ ಸೋಫಿ (19), ಆಮಿರ ಮೊಯಿನುದ್ದೀನ ವಾನಿ (21), ತಾಲಿಬ್ ವಾನಿ (19) ಅವರನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಮಂಗಳವಾರ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ ಅಜ್ಞಾತ ಸ್ಥಳದಲ್ಲೇ ವಿಚಾರಣೆ ನಡೆಸಲಾಗಿದ್ದು, ಆರೋಪಿಗಳ ಧ್ವನಿ ಮಾದರಿ ಸಂಗ್ರಹಿಸಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net