

ಸಿರಗುಪ್ಪ: ಬೆಂಗಳೂರಿನಿಂದ ತಾಲೂಕಿನ ಹಳ್ಳಿಯತ್ತ ಹೊರಟಿದ್ದ ಕಾರು ಎದುರಿನಿಂದ ಬರುತ್ತಿದ್ದ ಲಾರಿ ನಡುವೆ ತೆಕ್ಕಲಕೋಟೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯರಾತ್ರಿ ಭೀಕರ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ತಂದೆ-ಮಗ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಂಚೊಳ್ಳಿ ತಾಲೂಕಿನ ಚಿಮ್ಮಾದಲಾಯಿ ಮತ್ತು ಕೊರಡಂಪಳ್ಳಿ ಗ್ರಾಮದ ಭೀಮರಾವ ಬೆಳ್ಳೂರ(52), ಇವರ ಮಗ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಬಸವರಾಜ ಭೀಮರಾವ ಬೆಳ್ಳೂರ(30), ಖಾಸಗಿ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬಿಇ ಪದವೀಧರ ಸುನೀಲ್‌ಶಿವರಾಜ ಪಾಟಿಲ್(30), ಕಾರು ಚಾಲಕ ರೇವಣ್ಣಸಿದ್ದಬಸವರಾಜ ಕೊರಡಂಪಳ್ಳಿ(30) ಮೃತರು. ಸ್ಥಳಕ್ಕೆ ತೆಕ್ಕಲಕೋಟೆ ಸಿಪಿಐ ಕಾಳಿಕೃಷ್ಣ, ಪಿಎಸ್‌ಐ ಶಿವಕುಮಾರ್‌ನಾಯ್ಕ ಬೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.