

ಬೆಂಗಳೂರು: ರಮೇಶ್ ಜಾರಕಿಹೊಳಿ ಮಂತ್ರಿಸ್ಥಾನ ಕಸಿದುಕೊಂಡ ಅಶ್ಲೀಲ ಸಿಡಿ ಪ್ರಕರಣದ ಪ್ರಮುಖ ಆರೋಪಿಗಳು ಎನ್ನಲಾದ ಮಾಜಿ ಪತ್ರಕರ್ತ ನರೇಶ್ ಗೌಡ ಹಾಗೂ ಹ್ಯಾಕರ್ ಶ್ರವಣ್ 3 ತಿಂಗಳ ಗೌಪ್ಯ ವಾಸದ ಬಳಿಕ ಶನಿವಾರ ಎಸ್ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಪ್ರತ್ಯರಾದರು. ಸಿಡಿಯಲ್ಲಿರುವ ಯುವತಿ ನಮಗೆ ಗೊತ್ತು. ಆದರೆ, ಮಾಜಿ ಸಚಿವರಿಗೆ ಬ್ಲಾ$್ಯಕ್ಮೇಲ್ ಮಾಡಿರುವ ಸಂಗತಿ ಗೊತ್ತಿಲ್ಲ ಎಂದು ಎಸ್ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ ಎಂದು ಗೊತ್ತಾಗಿದೆ.
ತುಮಕೂರಿನ ನರೇಶ್ ಗೌಡ ಹಾಗೂ ವಿಜಯಪುರದ ಶ್ರವಣ್ ಶನಿವಾರ ಮಧ್ಯಾಹ್ನ 12 ಗಂಟೆಗೆ ಆಡುಗೋಡಿ ಟೆಕ್ನಿಕಲ್ ಕೇಂದ್ರದ ಬಳಿ ಹಾಜರಾದರು. ತನಿಖಾಧಿಕಾರಿ ಎಸಿಪಿ ಧಮೇರ್ಂದ್ರ, ಇಬ್ಬರನ್ನೂ ಪ್ರತ್ಯೇಕವಾಗಿ ಸತತ 5 ಗಂಟೆಗಳ ಕಾಲ ಸುಧೀರ್ ವಿಚಾರಣೆ ನಡೆಸಿ, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡರು. ಅವರ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಇಬ್ಬರ ಮೊಬೈಲ್ಗಳನ್ನೂ ವಶಕ್ಕೆ ಪಡೆದು ಪರಿಶೀಲಿಸಲಾಗಿದೆ. ಸೂಚಿಸಿದಾಗ ಮತ್ತೆ ವಿಚಾರಣೆಗೆ ಬರಬೇಕೆಂದು ತಿಳಿಸಿ, ಸಂಜೆ 5 ಗಂಟೆಗೆ ಬಿಟ್ಟು ಕಳುಹಿಸಿದ್ದಾರೆ. ವಕೀಲರ ಸಲಹೆ ಪಡೆದು ಅಗತ್ಯ ಸಿದ್ಧತೆ ನಡೆಸಿಯೇ ಇಬ್ಬರೂ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ವೇಳೆ ಪೊಲೀಸರಿಗೆ ಯಾವ ರೀತಿ ಉತ್ತರ ನೀಡಬೇಕು? ಯುವತಿಯ ವಿಚಾರಣೆ ವೇಳೆ ಯಾವ ಅಂಶ ಬೆಳಕಿಗೆ ಬಂದಿದೆ? ಎಸ್ಐಟಿ ಯಾವೆಲ್ಲ ಪ್ರಶ್ನೆಗಳನ್ನು ಕೇಳಬಹುದು? ಆ ಪ್ರಶ್ನೆಗಳಿಗೆ ಹೇಗೆ ಉತ್ತರ ನೀಡಬೇಕು? ಯಾವ ವಿಚಾರ ಪ್ರಸ್ತಾಪ ಮಾಡಬಾರದು? ಎಂಬಿತ್ಯಾದಿ ಪ್ರಶ್ನೆಗಳಿಗೆ ವಕೀಲರು ಮೊದಲೇ ಸಲಹೆ ನೀಡಿದ್ದು, ಉತ್ತರ ಸಿದ್ಧಪಡಿಸಿಕೊಂಡೇ ವಿಚಾರಣೆ ಎದುರಿಸಿದ್ದಾರೆ ಎಂದು ಹೇಳಲಾಗಿದೆ.
ಹಣಕ್ಕೆ ಬೇಡಿಕೆ ಇಟ್ಟಿಲ್ಲ: ಸಿಡಿಯಲ್ಲಿರುವ ಸಂತ್ರಸ್ತೆ ಕಾಲೇಜಿನಲ್ಲಿ ಪರಿಚಯವಾಗಿದ್ದಳು. ನಾವು ಎಲ್ಲೂ ಯಾರ ಬಳಿಯೂ ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಬ್ಲಾ$್ಯಕ್ಮೇಲ್ ಮಾಡಿಲ್ಲ. ಸಚಿವರಿಂದ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದು ಯುವತಿ ಹೇಳಿದ್ದಳು. ಮಾಧ್ಯಮದಲ್ಲಿದ್ದ ಕಾರಣ ನರೇಶ್ ಜತೆ ಸೇರಿ ಆಕೆಗೆ ನ್ಯಾಯ ಕೊಡಿಸಲು ಮುಂದಾಗಿದ್ದೆವು ಎಂದು ಶ್ರವಣ್ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಟ್ರಾವೆಲ್ ಹಿಸ್ಟರಿ ಬಿಟ್ಟು ಕೊಡಲಿಲ್ಲ: ಎಸ್ಐಟಿ ವಿಚಾರಣೆಗೆ ಬರುವ ಮುನ್ನವೇ ಶಂಕಿತರು ಈವರೆಗಿನ ತಮ್ಮ ಟ್ರಾವೆಲ್ ಹಿಸ್ಟರಿ ಸಿಗದಂತೆ ಎಚ್ಚರಿಕೆ ವಹಿಸಿದ್ದರು. ಶನಿವಾರ ಬೆಳಗ್ಗೆ ಜತೆಯಾಗಿ ಮೆಜೆಸ್ಟಿಕ್ಗೆ ಬಂದ ನರೇಶ್ ಹಾಗೂ ಶ್ರವಣ್ ಟ್ಯಾಕ್ಸಿ ಕ್ಯಾಬ್ ವಿಚಾರಿಸಿ "ಆಡುಗೋಡಿಗೆ ಬರುತ್ತೀರಾ' ಎಂದಿದ್ದರು. ಕ್ಯಾಬ್ ಬುಕ್ ಮಾಡಿದ್ರೆ ಮಾತ್ರ ಕರೆದುಕೊಂಡು ಹೋಗ್ತೇನೆ ಸರ್, ಇಲ್ಲದಿದ್ದರೆ ಲಾಕ್ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಹಿಡೀತಾರೆ ಎಂದು ಕ್ಯಾಬ್ ಚಾಲಕ ಹೇಳಿದ್ದ. "ಯಾರಾದರೂ ಕೇಳಿದರೆ ನಾವು ಹೇಳಿಕೊಳ್ಳುತ್ತೇವೆ ನಡಿಯಪ್ಪ' ಎಂದು ಹೇಳಿದ್ದರು. ಬಳಿಕ ಇಬ್ಬರನ್ನೂ ಆಡುಗೋಡಿ ಟೆಕ್ನಿಕಲ್ ಕೇಂದ್ರಕ್ಕೆ ಬಿಟ್ಟಿದ್ದೆ. ಬಾಡಿಗೆ 1 ಸಾವಿರ ರೂ. ನೀಡಿದ್ದರು ಎಂದು ಕ್ಯಾಬ್ಚಾಲಕ ತಿಳಿಸಿದ್ದಾನೆ. ಒಂದು ವೇಳೆ ಮೊಬೈಲ್ನಲ್ಲಿ ಕ್ಯಾಬ್ ಬುಕ್ ಮಾಡಿದರೆ, ತನಿಖಾಧಿಕಾರಿಗಳಿಗೆ ಮೊಬೈಲ್ ನಂಬರ್ ಗೊತ್ತಾಗಿ ಟವರ್ ಲೊಕೇಶನ್ ಮೂಲಕ ಉಳಿದುಕೊಂಡಿದ್ದ ಜಾಗ ಪತ್ತೆಹಚ್ಚ ಬಹುದು ಎಂಬ ಎಚ್ಚರಿಕೆ ವಹಿಸಿದ್ದಾರೆ ಎನ್ನಲಾಗಿದೆ. ಇವರು ಮೆಜೆಸ್ಟಿಕ್ಗೆ ರೈಲಿನಲ್ಲಿ ಬಂದರೋ ಅಥವಾ ಬೇರೆ ರಾಜ್ಯದಿಂದ ವಿಮಾನದಲ್ಲಿ ಬಂದು ವಿಮಾನ ನಿಲ್ದಾಣದಿಂದ ಮೆಜೆಸ್ಟಿಕ್ಗೆ ಬೇರೆ ವಾಹನದಲ್ಲಿ ಬಂದಿದ್ದಾರೋ ಎಂಬ ಸುಳಿವು ಸಿಕ್ಕಿಲ್ಲ.
ಶಂಕಿತರ ಪರ ವಕೀಲರೂ ಹಾಜರ್
ಶಂಕಿತರಿಬ್ಬರೂ ಟೆಕ್ನಿಕಲ್ ಸೆಂಟರ್ಗೆ ಬಂದ ಸಮಯಕ್ಕೆ ಸರಿಯಾಗಿ ಇವರ ಪರ ವಕೀಲರೂ ಅಲ್ಲಿ ಹಾಜರಿದ್ದರು. ನಂತರ ವಕೀಲರ ಮೂಲಕ ತನಿಖಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಮಾಹಿತಿ ಆಧರಿಸಿ ತನಿಖಾಧಿಕಾರಿಗಳು ಟೆಕ್ನಿಕಲ್ ಸೆಂಟರ್ಗೆ ಬಂದು ವಿಚಾರಣೆ ನಡೆಸಿದ್ದಾರೆ. ಇಟಿಯೋಸ್ ಬಾಡಿಗೆ ಕಾರಿನಲ್ಲಿ ಬಂದ ನರೇಶ್ ಹಾಗೂ ಶ್ರವಣ್ ಹೋಗುವಾಗ ವಕೀಲರ ಆಡಿ ಕಾರಿನಲ್ಲಿ ಮರಳಿದ್ದಾರೆ. ಆರ್.ಟಿ.ನಗರದ ಕಡೆ ಹೋದರು ಎಂದು ಹೇಳಲಾಗಿದೆ.
ನ್ಯಾಯ ಕೊಡಿಸಿ ಅಣ್ಣ ಎಂದಿದ್ದಳು
ಪರಿಚಿತ ಯುವತಿ ಮತ್ತು ಶ್ರವಣ್ ಮೂಲಕ ನನಗೆ ಸಂತ್ರಸ್ತೆಯ ಪರಿಚಯವಾಗಿತ್ತು. ಅನ್ಯಾಯವಾಗಿದೆ ಎಂದು ನನ್ನ ಬಳಿ ಬಂದಿದ್ದಳು. ನನ್ನನ್ನು ಆಕೆ ಅಣ್ಣ ಎಂದು ಕರೆಯುತಿದ್ದಳು. ಪ್ರಭಾವಿಯೊಬ್ಬರು ನನಗೆ ಅನ್ಯಾಯ ಮಾಡಿದ್ದಾರೆ. ನ್ಯಾಯ ಕೊಡಿಸಿ ಅಣ್ಣ ಎಂದಿದ್ದಳು. ಆ ಪ್ರಭಾವಿ ವ್ಯಕ್ತಿಗೆ ಬುದ್ಧಿ ಕಲಿಸಬೇಕು ಎಂದು ಅತ್ತಿದ್ದಳು. ನಾನು ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಳು. ಆದರೆ, ಬ್ಲಾ$್ಯಕ್ಮೇಲ್ ಮಾಡಿರುವ ಸಂಗತಿ ನನಗೆ ಗೊತ್ತಿಲ್ಲ. ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದರಿಂದ ಹಲವರನ್ನು ಸಂಪರ್ಕ ಮಾಡುತ್ತಿದ್ದೆ. ಸುದ್ದಿಗಳ ಸಂಬಂಧವಾಗಿ ಹಲವು ಗಣ್ಯರ ಸಂಪರ್ಕ ಮಾಡಿದ್ದೆ. ಕೆಲ ರಾಜಕಾರಣಿಗಳನ್ನೂ ಹಲವು ಬಾರಿ ಸಂಪರ್ಕ ಮಾಡಿದ್ದೇನೆ ಎಂದು ನರೇಶ್ ಗೌಡ ವಿಚಾರಣೆ ವೇಳೆ ಹೇಳಿದ್ದಾನೆ ಎನ್ನಲಾಗಿದೆ.