ಬೆಂಗಳೂರಿನ ಚಿರತೆ ಕಾರ್ಯಪಡೆ ಕಾರ್ಯಾರಂಭ

chita
Published on

ಬೆಂಗಳೂರು: ನಗರದ ಹೊರ ವಲಯದಲ್ಲಿ ಪದೇ ಪದೆ ಚಿರತೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇನ್ನು ಎರಡು ದಿನಗಳ ಒಳಗಾಗಿ ವಿಶೇಷ ಕಾರ್ಯಪಡೆ ಕಾರ್ಯಾರಂಭ ಮಾಡಲಿದೆ.

ಕಗ್ಗಲಿಪುರ, ಆನೇಕಲ್ಲು, ಯಲಹಂಕ, ಹೊಸಕೋಟೆ, ಕೆಆರ್ ಪುರ ವಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಹಾವಳಿ ತಡೆಗಟ್ಟಲು ಒಂದು ಪ್ರತ್ಯೇಕ ಕಾರ್ಯಪಡೆ ರಚಿಸಲಾಗುತ್ತಿದೆ.

ಬೆಂಗಳೂರು ಜಿಲ್ಲೆಯಲ್ಲಿನ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಲಭ್ಯ ಇರುವ ಸಲಕರಣೆ, ಸಂಪನ್ಮೂಲ ಬಳಸಿಕೊಂಡು ಕಾರ್ಯಪಡೆ ಕಾರ್ಯಗತಗೊಳಿಸಲು ಅರಣ್ಯ ಇಲಾಖೆ ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net