ಸುಲಲಿತ ಜನಜೀವನಕ್ಕೆ ಬೆಂಗಳೂರೇ ಬೆಸ್ಟ್‌: ಲಿವಿಂಗ್ ಇಂಡೆಕ್ಸ್​ನಲ್ಲಿ ಟಾಪ್ 1

bengluru top 1 city
bengluru
Published on

ಬೆಂಗಳೂರು: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸಿದ್ಧಪಡಿಸಿರುವ 'ಈಸ್‌ ಆಫ್ ಲಿವಿಂಗ್ ಇಂಡೆಕ್ಸ್ 2020' ರ ಪಟ್ಟಿಯಲ್ಲಿ ಬೆಂಗಳೂರು ಅಗ್ರ ಸ್ಥಾನ ಪಡೆದಿದೆ.

ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ ನಗರಗಳ ಪೈಕಿ ಸುಲಲಿತ ಜನಜೀವನಕ್ಕೆ ಬೆಂಗಳೂರು ಅತ್ಯುತ್ತಮ ನಗರ ಎನ್ನಲಾಗಿದೆ. ಪುಣೆ ಮತ್ತು ಅಹಮದಾಬಾದ್‌ ಪಟ್ಟಿಯಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಬರೇಲಿ, ಧನ್‌ಬಾದ್‌ ಮತ್ತು ಶ್ರೀನಗರ ಕಡೆಯ ಸ್ಥಾನಗಳಲ್ಲಿವೆ.

'ಈಸ್‌ ಆಫ್ ಲಿವಿಂಗ್ ಇಂಡೆಕ್ಸ್ 2020' ರ ಟಾಪ್‌ 10 ನಗರಗಳು:

1. ಬೆಂಗಳೂರು

2. ಪುಣೆ

3. ಅಹಮದಾಬಾದ್

4. ಚೆನ್ನೈ

5. ಸೂರತ್

6. ನವೀ ಮುಂಬೈ

7. ಕೊಯಮತ್ತೂರು

8. ವಡೋದರಾ

9. ಇಂದೋರ್

10. ಗ್ರೇಟರ್ ಮುಂಬೈ

'ಈಸ್‌ ಆಫ್ ಲಿವಿಂಗ್ ಇಂಡೆಕ್ಸ್ 2020' ನಲ್ಲಿ ಬೆಂಗಳೂರು ಅಗ್ರಗಣ್ಯವಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು, ಉತ್ತಮ ಜೀವನಮಟ್ಟ, ನಗರಾಭಿವೃದ್ಧಿ, ನಾಗರಿಕ ಸೇವೆಗಳಿಂದಾಗಿ ಇಡೀ ದೇಶದಲ್ಲೇ, ಸುಲಭ ಜೀವನ ನಡೆಸಲು ಬೆಂಗಳೂರು ಅತ್ಯಂತ ವಾಸಯೋಗ್ಯ ನಗರ ಎನ್ನುವ ಹಿರಿಮೆ ಗಳಿಸಿದ್ದು, ಇದಕ್ಕೆ ಕಾರಣವಾಗಿರುವ ಎಲ್ಲ ಇಲಾಖೆ, ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳು. ಬೆಂಗಳೂರಿನ ಸರ್ವಾಂಗೀಣ ಪ್ರಗತಿಗಾಗಿ ನಮ್ಮ ಪ್ರಯತ್ನಗಳನ್ನು ಮುಂದುವರಿಸೋಣ ಎಂದು ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net