

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಸ್ತುತ ವರ್ಷದಲ್ಲಿ 6,84,648 ಕೆ.ಜಿ.ಯಷ್ಟು ಮಾವಿನಹಣ್ಣನ್ನು ರಫ್ತು ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಋತುವಿನಲ್ಲಿ ಶೇ.124 ರಷ್ಟು ಏರಿಕೆ ಕಂಡಿದೆ.
ಬೆಂಗಳೂರು ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್ನ (ಬಿಐಎಎಲ್) ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸತ್ಯಕಿ ರುನಾಥ್ ಮಾತನಾಡಿ, ಬಿಎಲ್ಆರ್ ವಿಮಾನ ನಿಲ್ದಾಣವು ಭಾರತದಿಂದ ಫೆರಿಷಬಲ್ ರಫ್ತುಗಳನ್ನು ಸುಗಮಗೊಳಿಸುವಲ್ಲಿ ಚಾಲನಾ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಗಣನೀಯ ಪ್ರಮಾಣದ ಷೇರುಗಳೊಂದಿಗೆ, ದಣ ಭಾರತದ ಮಾವಿನಹಣ್ಣಿನ ಜಾಗತಿಕ ವ್ಯಾಪ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ವ್ಯವಸ್ಥಿತ ಕೂಲ್&ಪೋರ್ಟ್ನಿಂದ ರಫ್ತು ವ್ಯವಹಾರ ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ಪ್ರಸಕ್ತ ಋತುವಿನಲ್ಲಿ ಕಾಯಿಗಳ ರಫ್ತಿನಲ್ಲಿ ಶೇ.86 ಹೆಚ್ಚಳ ಕಂಡಿದೆ. ಒಟ್ಟಾರೆಯಾಗಿ 17 ಲದಷ್ಟು ಮಾವಿನಹಣ್ಣುಗಳನ್ನು ರಫ್ತು ಮಾಡಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದ ರ್ತು ಜಾಲವು 60ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಥಳಗಳಿಗೆ ವಿಸ್ತರಿಸಿಕೊಂಡಿದೆ. ಈ ವರ್ಷ ಯುನೈಟೆಡ್ ಸ್ಟೇಟ್ಸ್ಗೆ ಮಾವಿನಹಣ್ಣಿನ್ನು ವಿಶೇಷವಾಗಿ ರಫ್ತು ಮಾಡಲಾಗಿದೆ. ಡಲ್ಲಾಸ್ ಫೋರ್ಟ್ ವರ್ತ್, ವಾಷಿಂಗ್ಟನ್ ಡಿಸಿ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಂತಹ ಪ್ರಮುಖ ಮೆಟ್ರೋಪಾಲಿಟನ್ ಪ್ರದೇಶಗಳು ಈ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.