

ಬೆಂಗಳೂರು: ಟ್ರೆಂಡ್ ಬದಲಾಗಿದೆ..ಇತ್ತೀಚಿನ ದಿನಗಳಲ್ಲಿ ಅನೇಕರು ಹೊಸ ರೀತಿಯಲ್ಲಿ ಮದುವೆ ಸಮಾರಂಭಗಳನ್ನು ಮಾಡಲು ಇಷ್ಟಪಡುತ್ತಾರೆ. ಎಲ್ಲರಿಗಿಂತಲೂ ಭಿನ್ನವಾಗಿ, ವಿನೂತನವಾಗಿ ವಿವಾಹವಾಗಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ವರನೊಬ್ಬ ಎಲೆಕ್ಟ್ರಿಕ್ ಬೈಕ್ನಲ್ಲಿ ಮಂಟಪಕ್ಕೆ ಬಂದು ಎಲೆಕ್ಟ್ರಿಕ್ ವಾಹನದ (ಇವಿ) ಪಕ್ಕದಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಈ ವೀಡಿಯೋ ವೈರಲ್ ಆಗಿದೆ.
ಅಥರ್ ಎನರ್ಜಿ ಒಂದು ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಾಗಿದ್ದು, ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಇಲ್ಲಿ ಕೆಲಸ ಮಾಡುತ್ತಿರುವ ಇಂಡಸ್ಟ್ರಿಯಲ್ ಡಿಸೈನರ್ ದರ್ಶನ್ ಪಟೇಲ್ ಕಳೆದ ವಾರ ವಿವಾಹವಾದರು. ಈ ಕುರಿತು ಪ್ರತಿಕ್ರಿಯಿಸಿರುವ ಪೀಕ್ ಬೆಂಗಳೂರು ಎಂಬ ಸ್ಟಾರ್ಟಪ್ ಕಂಪನಿಯು ತನ್ನ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ "ಮದುವೆಗಳಲ್ಲಿ ಕುದುರೆಗಳ ಬದಲಿಗೆ ಅಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಳಸಲಾಗುತ್ತಿದೆ" ಎಂದು ಪೋಸ್ಟ್ ಮಾಡಿದೆ. ಈ ವೈರಲ್ ಫೋಟೋದಲ್ಲಿರುವ EV ಹೊಸದಾಗಿ ಬಿಡುಗಡೆಯಾದ Aether Rizta EV ಬೈಕ್ ಆಗಿದೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ವರ ಕೂಡ ಪ್ರತಿಕ್ರಿಯಿಸಿದ್ದಾರೆ. ರಿಜ್ತಾ ನನ್ನ ಮದುವೆ ಬಾರಾತ್ ಗೆ ಬಂದಿದ್ದಾಳೆ’ ಎಂದು ಪೋಸ್ಟ್ ಮಾಡಿದ್ದಾರೆ.
ಅಥರ್ ಎನರ್ಜಿ ಕೂಡ ತನ್ನ ಅಧಿಕೃತ ಖಾತೆಯಿಂದ ತಮಾಷೆಯ ಪ್ರತಿಕ್ರಿಯೆಯನ್ನು ನೀಡಿದೆ. “ಎಲ್ಲ ವರರೂ ಕುದುರೆಗಳ ಮೇಲೆ ತಿರುಗುತ್ತಾರೆ. ಆದರೆ ನಾವು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಆದ್ಯತೆ ನೀಡುತ್ತೇವೆ. ಅತ್ಯಾಕರ್ಷಕ ಮದುವೆಯ ದಿನಕ್ಕಾಗಿ ಅಥರ್ ಅನ್ನು ಸವಾರಿ ಮಾಡಿ. ಅದನ್ನು ಯಾವಾಗಲೂ ಸ್ವಚ್ಛವಾಗಿಡಿ” ಎಂದು ಇವಿ ತಯಾರಕರು ಪೋಸ್ಟ್ ಮಾಡಿದ್ದಾರೆ. ಎಲೆಕ್ಟ್ರೀಕ್ ಸ್ಕೂಟಿಯಲ್ಲು ಮದುವೆ ಮಂಟಪಕ್ಕೆ ಬಂದ ವರನ ವಿಡಿಯೋಗಳು ವೈರಲ್ ಆಗಿವೆ.