VIDEO| ಲಾಕ್​ಡೌನ್​ ನಡುವೆ 17ನೇ ಮಹಡಿಯಿಂದ ಬಿದ್ದು ಸಾಯಲು ಹೊರಟ್ಟಿದ್ದ ಯುವತಿ ಬಚಾವ್​ ಆಗಿದ್ದು ಹೇಗೆ?

Girl Save
Published on

ಬೆಂಗಳೂರು: ಆತಂಕಕಾರಿ ಘಟನೆಯೊಂದರಲ್ಲಿ 17ನೇ ಮಹಡಿಯಿಂದ ಬಿದ್ದು ಸಾಯಲು ಹೊರಟ್ಟಿದ್ದ ಯುವತಿಯನ್ನು ಅಗ್ನಿಶಾಮಕ ಸಿಬ್ಬಂದಿ ಬಹಳ ನಾಜೂಕಾಗಿ ರಕ್ಷಿಸಿದ್ದಾರೆ. ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಶುಕ್ರವಾರ ಬೆಳಗ್ಗೆ 1 ಗಂಟೆಯ ಸುಮಾರಿಗೆ ಘಟನೆ ನಡೆದಿದೆ.

ಶುಭಾ ರಕ್ಷಣೆಗೊಳಗಾದ ಯುವತಿ. ದೆಹಲಿ ಮೂಲದ ಶುಭಾ ಮಾನಸಿಕವಾಗಿ ನೊಂದಿದ್ದಳು ಎನ್ನಲಾಗಿದೆ. ಕೆಲ‌ ವರ್ಷಗಳ‌ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡಿದ್ದ ಶುಭಾ, ತಾಯಿಯ ವರ್ಷದ ಕಾರ್ಯಕ್ಕಾಗಿ ಎಲೆಕ್ಟ್ರಾನಿಕ್ ಸಿಟಿಯ ಪ್ರೆಸ್ಟೀಜ್‌ ಸನ್‌ರೈಸ್ ಅಪಾರ್ಟೆಂಟ್​ನ ತನ್ನ ಸಂಬಂಧಿಕರ ಮನೆಗೆ ಬಂದಿದ್ದಳು. ಆದರೆ, ಲಾಕ್​ಡೌನ್ ಇದ್ದಿದ್ದರಿಂದ ದೆಹಲಿಗೆ ಮರಳಲು ಸಾಧ್ಯವಾಗಿರಲಿಲ್ಲ.

ತಾಯಿ ಸಾವಿನಿಂದ ಸಾಕಷ್ಟು ನೊಂದಿದ್ದ ಶುಭಾ, ವರ್ಷದ ಕಾರ್ಯದ ವೇಳೆ ತಾಯಿಯ ನೆನಪಾಗಿ ಇನ್ನಷ್ಟು‌ ನೊಂದಿದ್ದಳು. ಹೀಗಾಗಿ ಸಾಯಲು‌ ನಿರ್ಧಾರ ಮಾಡಿದ್ದಳು ಎನ್ನಲಾಗಿದೆ. ಅಪಾರ್ಟ್ಮೆಂಟ್​ನ 17ನೇ ಮಹಡಿ ಏರಿದ್ದ ಶುಭಾ, ಭಯಗೊಂಡು ಕಿಟಕಿಯ ಕೆಳ ಭಾಗದಲ್ಲಿ ಹೆದರಿ ಕುಳಿತತಿದ್ದಳು. ಈ ವೇಳೆ ಇದನ್ನು ಗಮನಿಸಿದ ಅಪಾರ್ಟ್ಮೆಂಟ್​ನ ಅಸೋಸಿಯೇಷನ್ ವ್ಯಕ್ತಿ, ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು.

ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ತಾಳ್ಮೆ ಹಾಗು ಬುದ್ಧಿವಂತಿಕೆಯಿಂದ ಶುಭಾಳನ್ನು ಬಚಾವ್ ಮಾಡಿದರು. ಶುಭ ಕೂಡ ಅಗ್ನಿಶಾಮಕ ಸಿಬ್ಬಂದಿಗಳ ಮಾತಿಗೆ ಸ್ಪಂದಿಸಿದಳು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net