ನಮ್ಮ ಮೆಟ್ರೋ ಜಾಲ 118 ಕಿ.ಮೀ ವಿಸ್ತರಣೆ; ಕಾರ್ಯಸಾಧ್ಯತಾ ವರದಿಗೆ ಟೆಂಡರ್​ ಆಹ್ವಾನ

Namma Metro
Published on

ಬೆಂಗಳೂರು: ನಮ್ಮ ಮೆಟ್ರೋ ಸಂಪರ್ಕ ಜಾಲವನ್ನು ನಗರದ ಹೊರವಲಯಕ್ಕೆ ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮುಂದಾಗಿದೆ. ಇದರ ಭಾಗವಾಗಿ ಮೆಟ್ರೋ ರೈಲು ಕಾರಿಡಾರ್​ಗಳ ಮಾರ್ಗವನ್ನು 118 ಕಿ.ಮೀ. ವಿಸ್ತರಿಸಲು ಕಾರ್ಯಸಾಧ್ಯತಾ ಅಧ್ಯಯನ ವರದಿ ಸಿದ್ಧಪಡಿಸಲು ಟೆಂಡರ್​ ಆಹ್ವಾನಿಸಿದೆ.

ಮಾ.27ರವರೆಗೆ ಬಿಡ್​ಗಳನ್ನು ಸಲ್ಲಿಸಲು ಅವಕಾಶವಿದ್ದು, ಆರು ತಿಂಗಳಲ್ಲಿ ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಲು ಗಡುವು ನೀಡಲಾಗುವುದು ಎಂದು ಟೆಂಡರ್​ನಲ್ಲಿ ಉಲ್ಲೇಖಿಸಿದೆ. ಇದು ಯೋಜನೆಯ ಮೊದಲ ಹಂತವಾಗಿದ್ದು, ಸರ್ಕಾರ ವರದಿಯನ್ನು ಸ್ವೀಕರಿಸಿದ ಬಳಿಕ ವಿಸತ ಯೋಜನಾ ವರದಿ ಸಿದ್ಧಪಡಿಸಲಾಗುತ್ತದೆ.

ಮೆಟ್ರೋ ಮಾರ್ಗ ವಿಸ್ತರಣೆ ಸಂಬಂಧ ಎರಡು ಪ್ಯಾಕೇಜ್​ಗಳನ್ನಾಗಿ ವಿಂಗಡಿಸಲಾಗಿದೆ. ಒಂದನೇ ಹಂತದ ಪ್ಯಾಕೇಜ್​ನಲ್ಲಿ 50 ಕಿ.ಮೀ. ಉದ್ದ ಮೂರು ಕಾರಿಡಾರ್​ಗಳನ್ನು ಒಳಗೊಂಡಿವೆ. ಚಲ್ಲಟ್ಟದಿಂದ ಬಿಡದಿ, ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ಮೆಟ್ರೋ ವಿಸ್ತರಿಸಲು ಚಿಂತಿಸಲಾಗಿದೆ.

ಎರಡನೇ ಹಂತದ ಪ್ಯಾಕೇಜ್​ನಲ್ಲಿ 68 ಕಿ.ಮೀ. ದೂರದ ಮಾರ್ಗ ಇರಲಿದೆ. ಕಾಳೇನ ಅಗ್ರಹಾರದಿಂದ (ಗೊಟ್ಟಿಗೆರೆ) ಜಿಗಣಿ, ಆನೇಕಲ್​, ಅತ್ತಿಬೆಲೆ, ಸರ್ಜಾಪುರ, ವರ್ತೂರು, ಕಾಡುಗೋಡಿ ವೃಕ್ಷ ಉದ್ಯಾನವನ ವರೆಗೆ ಮಾರ್ಗ ಮೆಟ್ರೋ ಜಾಲ ವಿಸ್ತರಿಸಿಕೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net