

ಬೆಂಗಳೂರು: ಎಸ್ಎಸ್ಎಲ್ಸಿಯಲ್ಲಿ (SSLC) ಮೂರು ಬಾರಿ ಫೇಲ್ ಆಗಿದ್ದಕ್ಕೆ ಬಾಲಕನೊಬ್ಬ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿರುವ ಘಟನೆ ಬೆಂಗಳೂರಿನ ತಿಪ್ಪಸಂದ್ರದ ಸರ್ಕಲ್ನಲ್ಲಿ ನಡೆದಿದೆ.
ತಿಪ್ಪಸಂದ್ರದ ನಿವಾಸಿಯಾಗಿರುವ ಅಪ್ರಾಪ್ತ ಬಾಲಕ ದೈವ ಭಕ್ತನಾಗಿದ್ದನು. ಭುವನೇಶ್ವರಿ ದೇವಿಯನ್ನು ನಿತ್ಯವೂ ದೇವಿಯನ್ನು ಪೂಜಿಸುತ್ತಿದ್ದನಂತೆ. ಎಸ್ಎಸ್ಎಲ್ಸಿಯಲ್ಲಿ ಫೇಲ್ ಆಗಿದ್ದಕ್ಕೆ ದೇವರ ಮೇಲೆ ವಿಗ್ರಹ ವಿರೂಪಗೊಳಿಸಿದ್ದಾನೆ. ಬಾಲಕ ಮಧ್ಯರಾತ್ರಿ ಒಬ್ಬನೇ ಓಡಾಡುವುದು, ವಿಗ್ರಹ ವಿರೂಪಗೊಳಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗುರುವಾರ ರಾತ್ರಿ ವಿಗ್ರಹ ವಿರೂಪಗೊಳಿಸಿ ಹೋಗಿದ್ದಾನೆ. ಮರುದಿನ ದೇವಸ್ಥಾನಕ್ಕೆ ಬಂದ ಭಕ್ತರು ವಿಗ್ರಹ ವಿರೂಪಗೊಂಡಿದ್ದನ್ನು ಕಂಡು ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ.
ಜೀವನ್ ಭೀಮಾನಗರ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಬಾಲಕ ಕೃತ್ಯ ಬೆಳಕಿಗೆ ಬಂದಿದೆ.