

ಬೆಂಗಳೂರು: ಪ್ರಸಕ್ತ ವಷದ ಬಜೆಟ್ ಮಂಡನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಬಹುತೇಕ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆಯಾದರೂ, ಶುಕ್ರವಾರ ಮಂಡನೆ ಆಗುವುದಿಲ್ಲ.
ಇನ್ನೂ ಕೆಲವು ಅಂದಾಜುಗಳನ್ನು ಅಂತಿಮಗೊಳಿಸಬೇಕಿದೆ ಹಾಗೂ ಸರ್ಕಾರದ ಅಂಗೀಕಾರ ಸಿಗಬೇಕು. ಶನಿವಾರ ಅಥವಾ ಮುಂದಿನ ವಾರ ಬಜೆಟ್ ಮಂಡೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷ ಅಂದಾಜು 8 ಸಾವಿರ ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಬಹುದು ಎನ್ನಲಾಗಿದೆ. ಈ ಮೊತ್ತ, ಕಳೆದ ವರ್ಷ ಬಿಜೆಪಿ ನೇತೃತ್ವದ ಕೌನ್ಸಿಲ್ ಮಂಡನೆ ಮಾಡಿದ್ದ ಬಜೆಟ್ ಹೋಲಿಕೆಯಲ್ಲಿ 3,500 ಕೋಟಿ ರೂ. ಕಡಿಮೆಯಾದಂತಾಗುತ್ತದೆ.
ಈ ಹಿಂದೆ 2015-16ರಲ್ಲಿ ಬಿಜೆಪಿ ಬಜೆಟ್ ಮಂಡನೆ ಮಾಡಿತ್ತು. ವಿಜಯ ಭಾಸ್ಕರ್ ಅವರು ಬಿಬಿಎಂಪಿ ಆಡಳಿತಾಧಿಕಾರಿ ಆಗಿದ್ದಾಗ ವೆಚ್ಚ ಕಡಿತ ಮಾಡಿ ಆ ಬಜೆಟ್ನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.