ಬೆಂಗಳೂರಿನಲ್ಲಿ 3 ಬೀದಿ ನಾಯಿಗಳು ನಾಪತ್ತೆ; ಹುಡುಕಿ ಕೊಟ್ಟವರಿಗೆ 35 ಸಾವಿರ ರೂ. ಬಹುಮಾನ

dog
Published on

ಬೆಂಗಳೂರು: ಬೀದಿ ನಾಯಿಗಳನ್ನು ಹೊಡೆದು ಓಡಿಸೋರೇ ಮದ್ಯೆ ಇಲ್ಲೊಬ್ಬರು ಬೀದಿ ನಾಯಿಗಳಿಗೆ ಊಟ ನೀಡಿ ಪ್ರೀತಿ ತೋರಿಸುವವರು ಇದ್ದಾರೆ.  ಅತೀ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಬೀದಿ ನಾಯಿಗಳು ನಾಪತ್ತೆಯಾಗಿವೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕುಮಾರಪಾರ್ಕ್ ಬಳಿ ಕಳೆದ 10 ವರ್ಷದಿಂದ ಇದ್ದ ಈ 3 ಬೀದಿ ನಾಯಿಗಳನ್ನು ವಕೀಲೆ ವಿಪ್ಲವಿ ಮಹೇಂದ್ರ ಅವರು ಪೋಷಣೆ ಮಾಡುತ್ತಿದ್ದರು. ಸದ್ಯ ವಿಪ್ಲವಿ ಮಹೇಂದ್ರ ಇಂಗ್ಲೆಂಡ್‌ನಲ್ಲಿರುವ ಕಾರಣ ಅವರ ಅನುಪಸ್ಥಿತಿಯಲ್ಲಿ ಅವರ ಕಚೇರಿ ಸಿಬ್ಬಂದಿ ಪ್ರಕಾಶ್ ಅವರು ನಾಯಿಗಳ ಪೋಷಣೆ ಮಾಡುತ್ತಿದ್ದರು. ಆದರೆ ಲೋಬಿ, ದಂತ, ರಿಬಾ ಹೆಸರಿನ ಈ 3 ನಾಯಿಗಳು ಕಣ್ಮರೆಯಾಗಿವೆ. ಬೀದಿ ನಾಯಿಗಳಿಗಾಗಿ ನಗರದ ಹಲವೆಡೆ ಹುಡುಕಾಡಿದ್ದ ದೂರುದಾರ ಪ್ರಕಾಶ್ ಕೊನೆಗೆ ಈ ಬಗ್ಗೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕಚೇರಿ ಸಿಬ್ಬಂದಿ ಪ್ರಕರಣ ದಾಖಲಿಸಿದ್ದಾರೆ. ಎಫ್ಐಆರ್ ದಾಖಲಿಸಿದ ಶೇಷಾದ್ರಿಪುರಂ ಪೊಲೀಸರು ಮೂರು ಬೀದಿ ನಾಯಿಗಳನ್ನ ಪತ್ತೆ ಹಚ್ಚಲು ಮುಂದಾಗಿದ್ದಾರೆ.

ಕಾಣೆಯಾದ ಬೀದಿ ನಾಯಿಗಳ ಪೋಷಣೆ ಮಾಡುತ್ತಿದ್ದ ವಿಪ್ಲವಿ ಮಹೇಂದ್ರ ಅವರಿಂದಲೂ ಪ್ರತ್ಯೇಕ ತಂಡ ರಚಿಸಿ ಹುಡುಕಾಟ ನಡೆಸಲಾಗುತ್ತಿದೆ. ಒಂದೊಂದು ತಂಡದಲ್ಲಿ ಇಬ್ಬರು ವ್ಯಕ್ತಿಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ನಾಪತ್ತೆಯಾದ ನಾಯಿಗಳನ್ನು ಹುಡುಕಿ ಕೊಟ್ಟವರಿಗೆ ಬರೋಬ್ಬರಿ 35 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ.

ವಿದೇಶದಲ್ಲಿರೋ ವಕೀಲೆ ವಿಪ್ಲವಿ ಮಹೇಂದ್ರ ಟೀಮ್ ಜೊತೆ ಹಗಲು ರಾತ್ರಿ ಸಂಪರ್ಕ ಮಾಡುತ್ತಿದ್ದಾರೆ. ನಾಯಿ ಕಳೆದು ಹೋದ ಮೇಲೆ ನಗರದ ಮೆಜೆಸ್ಟಿಕ್ ನಲ್ಲಿ 2 ದಿನ 11 ಗಂಟೆ ಹುಡುಕಾಟ , ಗುಡ್ ಶೆಡ್ ರೋಡ್ ನಲ್ಲಿ 3 ದಿನ 11 ಗಂಟೆ ಹುಡುಕಾಟ .ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಸಾಪುರ,ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ.

ನಮ್ಮ ಆಫೀಸ್ ಸಿಬ್ಬಂದಿ ಪಾಪ್ಲೆಟ್ ಗಳನ್ನು ಬೆಂಗಳೂರಿನಾದ್ಯಂತ ಹಂಚಿ ನಾಯಿಗಳನ್ನು ಹುಡುಕಾತ್ತಾ ಇದ್ದಾರೆ.ಪಾಪ್ಲೆಟ್ ನಲ್ಲಿರೋ ನಾಯಿ ತೋರಿಸಿ ಎಲ್ಲಿಯಾದ್ರು ನೋಡಿದ್ರಾ ಅಂತ ಕೇಳ್ತಾ ಇದ್ದಾರೆ. ನಮ್ಮ ನಾಯಿ ನೋಡಿದ್ರೆ ,ಕಾಲ್ ಮಾಡಿ ತಿಳಿಸಿ ನಾವು ಬಂದು ಕರೆದುಕೊಂಡು ಹೋಗುತ್ತೇವೆ ಎಂದು ವಕೀಲೆ ವಿಟ್ಲವಿ ಮಹೇಂದ್ರ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net