ಪರೋಪಕಾರದಿಂದ ಮನುಷ್ಯನ ಜನ್ಮ ಸಾರ್ಥಕ

honor to retired soldiers
Published on

ರೋಣ: ಜಗತ್ತಿನಲ್ಲಿ ಹೂವಿಗೆ ಸಾಕಷ್ಟು ಬೆಲೆಯಿದೆ. ಆದರೆ, ಅದಕ್ಕೆ ಆಯುಷ್ಯ ಒಂದೇ ದಿನ. ಮನುಷ್ಯನ ಜೀವನ ನೂರು ಕಾಲ ಇದೆ. ಇನ್ನೊಬ್ಬರಿಗೆ ಸಹಾಯ ಸಹಕಾರ ನೀಡುವುದೇ ಮನುಷ್ಯನ ಜೀವನ. ಜಾತಿ ಜಾತಿ ಎನ್ನದೆ ಎಲ್ಲರೂ ಒಂದೇ ಎಂದು ಬದುಕಿದಾಗ ಮಾತ್ರ ಮನುಷ್ಯನ ಜನ್ಮ ಸಾರ್ಥಕವಾಗುತ್ತದೆ ಎಂದು ಡಾ. ಅಂತೂರ ಬೆಂತೂರಿನ ಕುಮಾರ ದೇವರು ಹೇಳಿದರು.

ತಾಲೂಕಿನ ಹೊನ್ನಾಪುರ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಭಜನೆ ಸಪ್ತಾಹದ ಮುಕ್ತಾಯ ಹಾಗೂ ಗ್ರಾಮದ ನಿವೃತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನಿವೃತ್ತ ಯೋಧರಾದ ಭರಮಪ್ಪ ಬೂದಿಹಾಳ, ವೀರಪ್ಪ ಕುರಿ, ಹನಮಪ್ಪ ಕುರಿ ಅವರನ್ನು ಸನ್ಮಾನಿಸಲಾಯಿತು.

ಫಕೀರೇಶ್ವರ ಶಿವಾಚಾರ್ಯರು, ಶಂಕರಗೌಡ ಪಾಟೀಲ, ರಾಚಯ್ಯ ಹಿರೇಮಠ, ಶೇಖರಯ್ಯ ಹಿರೇಮಠ, ರುದ್ರಪ್ಪ ಕೀಂದ್ರಿ, ಶೇಖಪ್ಪ ಕೀಂದ್ರಿ, ಬಿ.ಡಿ. ಹೊಸಮನಿ, ಗ್ರಾಪಂ ಸದಸ್ಯರಾದ ಭರಮಪ್ಪ ಬೂದಿಹಾಳ, ಮಹಾದೇವಪ್ಪ ಹಕ್ಕಿ, ಶಿವಪ್ಪ ಹಕ್ಕಿ, ಹುಚ್ಚಪ್ಪ ಜಿಗಳೂರ, ಭಜನಾ ಸಂಘದ ಯುವಕರು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net