ಬ್ಯಾಂಕ್‌ಗಳಿಗೆ ರೈತರಿಗೆ, ವ್ಯಾಪಾರಸ್ಥರಿಗೆ ಅನುಕೂಲ

Benefits for banks, farmers, and businessmen
ವಿಜಯಪುರದ ವಿವೇಕ ನಗರದಲ್ಲಿ ಶ್ರೀ ಸೌಹಾರ್ದ ಸಹಕಾರಿ ಸಂಘ ನಿಯಮಿತದ 10ನೇ ಶಾಖೆಯನ್ನು ಗುರುಶಾಂತ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮತ್ತಿತರರಿದ್ದಾರೆ.
Published on

ವಿಜಯಪುರ: ಬ್ಯಾಂಕುಗಳು ಪ್ರಾರಂಭಗೊಳ್ಳುವುದರಿಂದ ಕಾರ್ಮಿಕರಿಗೆ, ವ್ಯಾಪಾರಸ್ಥರಿಗೆ ಹಾಗೂ ರೈತರಿಗೆ ಅನುಕೂಲವಾಗಲಿದೆ ಎಂದು ಬೊಮ್ಮನಹಳ್ಳಿ ಗವಿಮಠದ ಗುರುಶಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಇಬ್ರಾಹಿಂಪುರ ಬಳಿಯ ವಿವೇಕ ನಗರದಲ್ಲಿ ಭಾನುವಾರ ಶ್ರೀ ಸೌಹಾರ್ದ ಸಹಕಾರಿ ಸಂಘದ 10ನೇ ಶಾಖೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ನಂತರ ಬ್ಯಾಂಕ್ ವತಿಯಿಂದ ಶ್ರೀಗಳಿಗೆ ಗೌರವ ಸಮರ್ಪಿಸಲಾಯಿತು. ಸಂಘದ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ರಾಜಶೇಖರ ಗುಡದಿನ್ನಿ, ರವಿ ಬಗಲಿ, ದರಿಯಪ್ಪ ಮೆಂಡೆಗಾರ, ಮಹಾದೇವ ಗಚ್ಚಿನಮಠ, ಜಗನ್ನಾಥ ಚೌಧರಿ, ರೂಪಸಿಂಗ್ ಲೋಣಾರಿ, ಪಾಲಿಕೆಯ ಮಾಜಿ ಮೇಯರ್ ಗೋಪಾಲ ಘಟಕಾಂಬಳೆ, ಚಂದ್ರಶೇಖರ ಕವಟಗಿ, ಪ್ರಕಾಶ ಮಿರ್ಜಿ, ನಿರ್ವಹಣಾ ಅಧಿಕಾರಿ ಶಂಕರಗೌಡ ಪಾಟೀಲ, ನಿರ್ದೇಶಕ ಮಂಡಳಿ ಸದಸ್ಯರಾದ ಅಪ್ಪು ಸಜ್ಜನ, ಸಂತೋಷ ಜಾಧವ, ರಮೇಶ್ ರೇಷ್ಮಿ, ಸಿದ್ದರಾಮಯ್ಯ ಮಲ್ಲಿಕಾರ್ಜುನಮಠ, ವಿರೂಪಾಕ್ಷಪ್ಪ ಹಣಮಶೆಟ್ಟಿ, ಅಮರ ನಾಗಠಾಣ, ವೈಜಿನಾಥ ಭೋಗಶೆಟ್ಟಿ, ಬಾಬು ಲಕ್ಷ್ಮಣ ಜಾದವ, ಶಿವಾನಂದ ಬಿರಾದಾರ (ಸಕ್ರಿ), ಈರಣ್ಣ ಚಿಂಚಲಿ ರಜನಿ ಸಂಬಣ್ಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net