ಪ್ರಥಮ ಬಾರಿಗೆ ಪಿಎಸಿಸಿಎಸ್‌ಗೆ ಲಾಭ

31 hhr 01
ಅರಹತೊಳಲು ಕೃಷಿ ಪತ್ತಿನ ಸಹಕಾರ ಸಂಘದ ಸಾಮಾನ್ಯ ಸಭೆಯನ್ನು ಪಿ.ಚಂದ್ರಶೇಖರ್ ಉದ್ಘಾಟಿಸಿದರು. ರಾಜೇಶ್ ಪಟೇಲ್, ಯತೀಶ್ವರಾಚಾರ್, ರವಿಕುಮಾರ್, ಬಸವರಾಜ್, ನಾಗೇಂದ್ರಯ್ಯ, ಶೇಖರಪ್ಪ ಇತರರಿದ್ದರು.
Published on

ಹೊಳೆಹೊನ್ನೂರು: ಆರು ವರ್ಷಗಳ ಪರಿಶ್ರಮದ ಫಲವಾಗಿ ಅರಹತೊಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಥಮ ಬಾರಿಗೆ ಲಾಭದತ್ತ ಹೆಜ್ಜೆ ಇಡುತ್ತಿದೆ ಎಂದು ಸಂಘದ ಅಧ್ಯಕ್ಷ ಪಿ.ಚಂದ್ರಶೇಖರ್ ಹೇಳಿದರು.
ಸೋಮವಾರ ಕೃಷಿ ಪತ್ತಿನ ಸಹಕಾರ ಸಂಘದ ಆರನೇ ವರ್ಷದ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಂಘವು 5.71 ಲಕ್ಷ ರೂ. ಲಾಭ ಗಳಿಸಿದೆ. ರೈತರಿಗೆ 5.87 ಕೋಟಿ ರೂ. ಸಾಲ ನೀಡಿದ್ದು ಶೇ.99 ಮರುಪಾವತಿ ಆಗಿದೆ. ಇನ್ನುಳಿದ ಒಂದು ಪರ್ಸೆಂಟ್ ಖಾತೆದಾರರು ಮರಣ ಹೊಂದಿದ ಕಾರಣ ಖಾತೆ ಬದಲಾವಣೆಯಲ್ಲಿ ವಿಳಂಬವಾದ್ದರಿಂದ ಸುಸ್ತಿಯಾಗಿರುತ್ತದೆ. ಇದೂ ಮುಂದಿನ ದಿನಗಳಲ್ಲಿ ಶೇ.100 ಮರುಪಾವತಿ ಗುರಿ ಸಾಧಿಸುವುದರಲ್ಲಿ ಅನುಮಾನವಿಲ್ಲ ಎಂದರು.
ಇನ್ನು ಮುಂದೆ ಕೇಂದ್ರ ಸರ್ಕಾರದ ಹೊಸ ಆದೇಶದಂತೆ ಸಂಘದ ಹೆಸರು ಸಹಿತ ಇಡೀ ಬೈಲಾವೇ ನವೀಕರಣವಾಗುವುದು. ಅದರಂತೆ ಕೃಷಿ ಪತ್ತಿನ ಸಹಕಾರ ಸಂಘದ ಬದಲು, ವಿವಿಧೋದ್ದೇಶ ಕೃಷಿ ಪತ್ತಿನ ಸಹಕಾರ ಸಂಘ ಎಂದು ಮರುನಾಮಕರಣ ಆಗುವುದು. ರೈತರು ಸಾಲ ಪಡೆಯುವುದು, ಕಟ್ಟುವುದು ಮಾತ್ರವಲ್ಲದೆ ಇದೊಂದು ಸ್ಥಳೀಯ ಬ್ಯಾಂಕ್ ಆಗಿ ಕಾರ್ಯನಿರ್ವಹಿಸಲಿದೆ. ರೈತರಿಗೆ ಅವಶ್ಯವಿರುವ ಬಂಗಾರ ಅಡಮಾನ ಸಾಲ, ಅಡಕೆ ಅಡಮಾನ ಸಾಲ, ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಉಪಕರಣ ಹೀಗೆ ಎಲ್ಲವನ್ನೂ ಒಸಗಿಸುವ ಕೇಂದ್ರವಾಗಲಿದೆ. ಜನರಿಗೆ ಪಡಿತರ, ಗ್ಯಾಸ್ ಸಿಲಿಂಡರ್ ವಿತರಣೆಯಂತಹ ಕಾರ್ಯಗಳು ಆರಂಭವಾಗಲಿವೆ. ಇದರಿಂದ ಸಹಕಾರ ಸಂಘ ಎಲ್ಲ ವರ್ಗದವರ ಆರ್ಥಿಕ, ಸಾಮಾಜಿಕ ಕೇಂದ್ರವಾಗಲಿದೆ ಎಂದರು.
ಉಪಾಧ್ಯಕ್ಷ ಯತೀಶ್ವರಾಚಾರ್, ಮಾಜಿ ಅಧ್ಯಕ್ಷ ರಾಜೇಶ್ ಪಟೇಲ್, ರವಿಕುಮಾರ, ಬಸವರಾಜ್, ಪಾಲಾಕ್ಷಪ್ಪ, ಮಲ್ಲಿಕಾರ್ಜುನ್, ಸಿದ್ದಪ್ಪ, ಎನ್.ನಾಗೇಂದ್ರಯ್ಯ, ಶೇಖರಪ್ಪ, ಯಶೋದಾ, ಜಯಲಕ್ಷ್ಮೀ ರೇಖಾ, ಸುರೇಶ್, ವೀರೇಶ್, ಜಯದೇವಪ್ಪ, ಎಂ.ಪಾಲಾಕ್ಷಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net