

ತೂಬಗೆರೆ: ಮಾನವ ಜೀವಸಂಕುಲದೊಂದಿಗೆ ಬದುಕಬೇಕು. ಹೀಗಾಗಿ ಹೆಚ್ಚುಚ್ಚು ಗಿಡ ಮರ ಪೋಷಿಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಜಿಪಂ ಮಾಜಿ ಸದಸ್ಯ ಎನ್.ಅರವಿಂದ್ ಹೇಳಿದರು.
ತೂಬಗೆರೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆರ್‌ಎಸ್‌ಎಸ್‌ನಿಂದ ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಫೌಂಡೇಷನ್, ರಾಷ್ಟೀಯ ಸ್ವಯಂ ಸೇವಕರ ಸಂಘ ಹಾಗೂ ರಂಗವಿಜಯ ಸಾಂಸ್ಕೃತಿಕ ಕಲಾವೇದಿಕೆ, ಪ್ರಶಾಂತನಗರದ ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಕೃತಿ ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಕೃತಿಕ ಅಸಮತೋಲನ ಮತ್ತು ಹವಮಾನ ವೈಪರೀತ್ಯ ನಿವಾರಣೆಗೆ ಕಡ್ಡಾಯವಾಗಿ ಮರಗಿಡ ಬೆಳಸಬೇಕು. ಪರಿಸರ ಸಂರಕ್ಷಣೆ ನಮ್ಮ ಜೀವನ ಶೈಲಿಯಾಗಿ ರೂಪಿಸಿಕೊಳ್ಳಬೇಕು. ಶಾಲೆಗಳಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಾಣವಾಗಬೇಕು ಎಂದರು.
ಆಮ್ಲಜನಕ, ಆಹಾರ ಮತ್ತು ಆರೋಗ್ಯಕ್ಕಾಗಿ ಸಸಿ ನೆಡಬೇಕು, ದೇಶಾದ್ಯಂತ ಅರಣ್ಯ ಸಂಪತ್ತು ಉಳಿಸುವ ಕಾರ್ಯವಾಗಬೇಕು. ಪರಿಸರ ಬೆಳೆಸಿದಷ್ಟೂ ಮಾನವನಿಗೆ ಸಹಾಯವಾಗುತ್ತದೆ. ಪರಿಸರ ನಾಶವಾಗದಂತೆ ಮನುಷ್ಯನ ಬದುಕು ಕೂಡ ದುರ್ಬಲಗೂಳ್ಳುತ್ತದೆ ಎಂಬುವುದನ್ನು ಪ್ರತಿಯೊಬ್ಬರೂ ತಿಳಿಯಬೇಕು ಎಂದು ಹೆಳಿದರು.
ಸೋತೇನಹಳ್ಳಿ ಆರಣ್ಯ ಪ್ರದೇಶ ಮತ್ತು ಜಕ್ಕಲಮುಡು ಆರಣ್ಯ ಪ್ರದಶೇ ಹಾಗೂ ತೂಬಗೆರೆ ಸುತ್ತ ಮುತ್ತಲು 5000 ಬೀಜ ಉಂಡೆಗಳನ್ನು ಬಿತ್ತನೆ ಮಾಡಲಾಯಿತು. ಆರ್‌ಎಸ್‌ಎಸ್ ಪರ‌್ಯಾವರಣ ಸಂರಕ್ಷಣಾ ಸಂಚಾಲಕ ಕೆ.ರಘುನಾಥ್, ಲಯನ್ಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಎನ್.ಜಗದೀಶ್ ಕುಮಾರ್, ರಂಗವಿಜಯ ಸಾಂಸ್ಕೃತಿಕ ಕಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕುಮಾರ್, ಪರಿಸರವಾದಿ ಟಿ.ವಿ ಮಂಜುನಾಥ್, ವಿದ್ಯುತ್ ಗುತ್ತಿಕೆದಾರ ಎನ್.ವೆಂಕಟೇಶ್, ಗ್ರಾಪಂ ಸದಸ್ಯ ಟಿ.ವಿ.ವೆಂಕಟೇಶ್ ಹಾಜರಿದ್ದರು.