ಮಿಷನ್​ ಇಂದ್ರಧನುಷ್​ ಪ್ರಯೋಜನ ಪಡೆಯಲು ಕರೆ

udp-11-indradanush
Published on

ಉಡುಪಿ: ಮಿಷನ್​ ಇಂದ್ರಧನುಷ್​ ಲಿಸಿಕಾ ಅವಧಿಯಲ್ಲಿ ಜಿಲ್ಲೆಯ 5 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರು, ಲಸಿಕೆ ವಂಚಿತ ಮಕ್ಕಳು ದಡಾರ ರುಬೆಲ್ಲಾ ಇನ್ನಿತರ ನಿಗದಿತ ಲಸಿಕೆ ಪಡೆದು ಆರೋಗ್ಯವಂತ ಜಿಲ್ಲೆಯನ್ನಾಗಿಸಲು ಕೊಡುಗೆ ನೀಡಬೇಕು ಎಂದು ಶಾಸಕ ಯಶ್ಪಾಲ್​ ಸುವರ್ಣ ತಿಳಿಸಿದರು.

ಸೋಮವಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೆ.11 ರಿಂದ 16 ರವರೆಗೆ ನಡೆಯುವ ಪರಿಣಾಮಕಾರಿ ಮಿಷನ್​ ಇಂದ್ರಧನುಷ್​ 5.0 ಲಸಿಕಾ ಅಭಿಯಾನ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಜಿಲ್ಲಾಧಿಕಾರಿ ಡಾ ವಿದ್ಯಾ ಕುಮಾರಿ ಮಾತನಾಡಿ, ಲಸಿಕೆ ವಂಚಿತ ಮಕ್ಕಳು ಎರಡನೇ ಸುತ್ತಿನ ಪರಿಣಾಮಕಾರಿ ಮಿಷನ್​ ಇಂದ್ರಧನುಷ್​ ಲಸಿಕಾ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕು. ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಂಡು ಸ್ಥಸ್ಥ ಸಮಾಜದ ನಿಮಾರ್ಣಕ್ಕೆ ಸಹಕರಿಸುವಂತೆ ಹೇಳಿದರು.

ನಗರಸಭಾ ಸದಸ್ಯೆ ರಶ್ಮೀ ಚಿತ್ತರಂಜನ್​, ಪೌರಾಯುಕ್ತ ರಾಯಪ್ಪ, ಜಿಲ್ಲಾ ಆರ್​.ಸಿ.ಎಚ್​.ಅಧಿಕಾರಿ ಡಾ. ರಾಮ್​, ಜಿಲ್ಲಾ ಸರ್ಜನ್​ ಡಾ. ವೀಣಾ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net