ಗುಣಮಟ್ಟದ ಹಾಲಿನಿಂದ ಲಾಭ

Untitled-2
ದೇವನಹಳ್ಳಿ ತಾಲೂಕಿನ ಬೊಮ್ಮವಾರ ಗ್ರಾಮದಲ್ಲಿ ಎಂಪಿಸಿಎಸ್​ ನೂತನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಕೆ.ಎಚ್​.ಮುನಿಯಪ್ಪ ಲೋಕಾರ್ಪಣೆ ಮಾಡಿದರು. ಡೇರಿ ಅಧ್ಯಕ್ಷ ರವಿಕುಮಾರ್​, ಬಮುಲ್​ ನಿದೇರ್ಶಕ ಎಸ್​.ಪಿ.ಮುನಿರಾಜು, ಬಯಪ ನಿರ್ದೇಶಕರಾದ ಸಿ.ಪ್ರಸನ್ನಕುಮಾರ್​, ಮಂಜುನಾಥ್​ ಇತರರು ಇದ್ದರು.
Published on

ದೇವನಹಳ್ಳಿ : ಗುಣಮಟ್ಟ ಹಾಗೂ ್ಯಾಟ್​ ಅಂಶ ಹೆಚ್ಚಿರುವ ಹಾಲು ಪೂರೈಸಿದರೆ ರೈತರು ಹೈನುಗಾರಿಕೆಯಲ್ಲಿ ಲಾಭ ಗಳಿಸಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್​.ಮುನಿಯಪ್ಪ ಹೇಳಿದರು. ತಾಲೂಕಿನ ಕಸಬಾ ಹೋಬಳಿಯ ಬೊಮ್ಮವಾರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂದಿಂದ ನಿರ್ಮಿಸಿರುವ ನೂತನ ಕಟ್ಟಡವನ್ನು ಭಾನುವಾರ ಲೋಕಾರ್ಪಣೆ ಮಾಡಿ ಮಾತನಾಡಿದರು. ಸರ್ಕಾರ ಲೀಟರ್​ ಹಾಲಿಗೆ ಪ್ರೋತ್ಸಾಹ ಧನವಾಗಿ 5 ರೂ. ನೀಡುತ್ತಿದೆ. ಈ ಭಾಗದಲ್ಲಿ ರೇಷ್ಮೆ ಮತ್ತು ಹಾಲು ರೈತರ ಜೀವನಾಧಾರಿತ ಉಪಕಸುಬುಗಳಾಗಿವೆ. ಹೆಚ್ಚು ಹೆಚ್ಚು ಹಾಲು ಮತ್ತು ರೇಷ್ಮೆ ಬೆಳೆ ಅವಲಂಬಿಸಿದರೆ ನಿಮಗೆ ಸರ್ಕಾರದ ಸಹಕಾರವೇ ಬೇಕಿಲ್ಲ. ನೀವೇ ಅಭಿವೃದ್ಧಿಹೊಂದುವಿರಿ ಎಂದರು.

ರೈತರು ಭೂಮಿ ಕೊಡಲು ವಿಳಂಬ ಮಾಡಿದ್ದರಿಂದ ಬಹುಕೋಟಿಯ ಎತ್ತಿನಹೊಳೆ ಯೋಜನೆ ಕಾಮಗಾರಿ ವಿಳಂಬವಾಗಿತ್ತು. ಈಗ ಒಂದೂವರೆ ವರ್ಷದಲ್ಲಿ ಎತ್ತಿನಹೊಳೆ ನೀರು ಸಿಗಲಿದೆ. ಇದರ ಜತೆಗೆ ಎಚ್​.ಎನ್​.ವ್ಯಾಲಿ ನೀರು ಹೆಚ್ಚಳ ಮಾಡಿ ಅಂತರ್ಜಲ ವೃದ್ಧಿಸಲಾಗುವುದು. ಸರ್ಕಾರ ರೈತರ ಮತ್ತು ಬಡಜನರ ಪರವಾಗಿದೆ. ೇತ್ರದಲ್ಲಿ ಸಾಕಷ್ಟು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಅದೇ ರೀತಿ ಯುವಕರಿಗೆ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದರು. ಎಂಪಿಸಿಎಸ್​ ಅಧ್ಯಕ್ಷ ರವಿಕುಮಾರ್​ ಮಾತನಾಡಿ, ನಮ್ಮ ಸಂ ಪ್ರಗತಿದಾಯಕವಾಗಿ ನಡೆಯುತ್ತಿದ್ದು, ಬಮುಲ್​ನಿಂದ 4.50 ಲಕ್ಷ ರೂ., ಕೆಎಂಎಫ್​ನಿಂದ 4.50 ಲಕ್ಷ ರೂ. ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2ಲಕ್ಷ ರೂ., ದಾನಿಗಳಿಂದ 3 ಲಕ್ಷ ರೂ. ಧನಸಹಾಯದೊಂದಿಗೆ ಹೊಸಕಟ್ಟಡ ನಿರ್ಮಾಣಗೊಂಡಿದೆ ಎಂದರು.

ಬಮುಲ್​ ನಿರ್ದೇಶಕ ಎಸ್​.ಪಿ.ಮುನಿರಾಜು ಮಾತನಾಡಿ, ಬಮುಲ್​ ಸದೃಢವಾಗಿದೆ. ಪ್ರತಿದಿನ 96 ಸಾವಿರ ಲೀಟರ್​ ಹಾಲು ಕೊಡುತ್ತಿದ್ದೀರಿ. ಮೊದಲು 1.5 ಲಕ್ಷ ಲೀಟರ್​ ಸಂಗ್ರಹವಾಗುತ್ತಿತ್ತು. ಈಗ ಕೆಐಎಡಿಬಿಗೆ ಭೂಮಿ ತೆಗೆದುಕೊಳ್ಳುತ್ತಿರುವುದರಿಂದ ಹೈನುಗಾರಿಕೆ ಕಡಿಮೆಯಾಗುತ್ತಿದೆ. ಜತೆಗೆ ಇಂಡಿ, ಬೂಸಾ, ಫೀಡ್​ ಬೆಲೆ ಹೆಚ್ಚಳದಿಂದ ಹೈನುಗಾರಿಕೆ ಕಷ್ಟವಾಗಿದೆ ಎಂದರು. ಒಕ್ಕೂಟದಲ್ಲಿ ಬ್ಯಾಂಕ್​ ವ್ಯವಸ್ಥೆ ಇಲ್ಲದಿರುವುದರಿಂದ ಬಿಡಿಸಿಸಿ ಬ್ಯಾಂಕ್​ನಲ್ಲಿ ನೂರು ಕೋಟಿ ಠೇವಣಿ ಇಟ್ಟು ಸಹಕಾರ ಸಂಗಳ ಮೂಲಕ ಉತ್ಪಾದಕರಿಗೆ ಸಾಲ ಕೊಡಲು ಬಮುಲ್​ ಅಧ್ಯಕ್ಷ ಡಿ.ಕೆ.ಸುರೇಶ್​ ಮುಂದಾಗಿದ್ದಾರೆ. ಡೇರಿಯಲ್ಲಿ ಶಿಾರಸು ಮಾಡಿದ ಹೈನುಗಾರರಿಗೆ ಶೇ.3ರ ವಾರ್ಷಿಕ ಬಡ್ಡಿ ದರದಲ್ಲಿ ಸಾಲ ಸಿಗಲಿದೆ. ಉತ್ಪಾದಕರ ಮಕ್ಕಳಿಗೆ ಶೇ.30, ಸಿಬ್ಬಂದಿ ಮಕ್ಕಳಿಗೆ ಶೇ.5, ಅಧಿಕಾರಿಗಳ ಮಕ್ಕಳಿಗೆ ಶೇ.5 ಬಮುಲ್​ನಲ್ಲಿ ಉದ್ಯೋಗ ಮೀಸಲಿಗೆ ಅಧ್ಯಕ್ಷರು ಕ್ರಮ ವಹಿಸಿದ್ದಾರೆ ಎಂದರು.

ಗ್ರಾಪಂ ಅಧ್ಯೆ ವೆಂಕಟಮ್ಮ, ಸದಸ್ಯ ನರಸಿಂಹರಾಜು, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಬಿ.ರಾಜಣ್ಣ, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸಿ.ಜಗನ್ನಾಥ್​, ಸಂದ ಅಧ್ಯಕ್ಷ ರವಿಕುಮಾರ್​, ಮಾಜಿ ಅಧ್ಯಕ್ಷ ಸೋಮಶೇಖರ್​, ದಿನಕರ್​, ಸುಂದರೇಶ್​, ರಮೇಶ್​, ಉಪಾಧ್ಯೆ ಶಕುಂತಲಮ್ಮ, ನಿರ್ದೇಶಕರಾದ ನರಸಿಂಹಪ್ಪ, ಮುನಿನಾರಾಯಣಪ್ಪ, ರವಿಕುಮಾರ್​, ಅಚ್ಚಪ್ಪ, ಬಿ.ಎನ್​.ನಾರಾಯಣಪ್ಪ, ದ್ಯಾವಮ್ಮ, ಭಾಗ್ಯಮ್ಮ, ಮುನಿನಾರಾಯಣಪ್ಪ, ಎಸ್​.ರಾಮಾಂಜಿನಪ್ಪ, ನಂಜೇಗೌಡ, ಬಿ.ಎಚ್​. ನಾರಾಯಣಸ್ವಾಮಿ, ಸಿಇಒ ಅಶ್ವತ್ಥಪ್ಪ, ೇಮಾಭಿವೃದ್ದಿ ಸಂದ ಜಿಲ್ಲಾ ಅಧ್ಯಕ್ಷ ಲೋಕೇಶ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net