ಯಂತ್ರಶ್ರೀ ಪದ್ಧತಿ ಬೇಸಾಯದಿಂದ ಲಾಭ

nrp krushi
ಎನ್.ಆರ್.ಪುರ ತಾಲೂಕು ಹಾತೂರು ಗ್ರಾಮದಲ್ಲಿ ಯಾಂತ್ರೀಕೃತ ಶ್ರೀ ಪದ್ಧತಿ ಭತ್ತದ ಬೇಸಾಯದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ನಿರಂಜನ್ ಮಾತನಾಡಿದರು. ಮಹೇಶ್, ರಾಘವೇಂದ್ರ, ಸಿದ್ದಪ್ಪಗೌಡ, ಕವಿತಾ, ಶಿವಕುಮಾರ್, ಕೃಷ್ಣಮೂರ್ತಿ ಇತರರಿದ್ದರು.
Published on

ನ್.ಆರ್.ಪುರ: ರೈತರು ಯಂತ್ರಶ್ರೀ ಪದ್ಧತಿಯಲ್ಲಿ ಭತ್ತದ ಬೇಸಾಯ ಮಾಡಿದರೆ ಖರ್ಚು ಕಡಿಮೆಯಾಗಿ ಲಾಭ ಜಾಸ್ತಿಯಾಗಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪ, ಎನ್.ಆರ್.ಪುರ ತಾಲೂಕುಗಳ ಯೋಜನಾಧಿಕಾರಿ ನಿರಂಜನ್ ತಿಳಿಸಿದರು.

ಹಾತೂರು ಗ್ರಾಮದ ಕಾರ್‌ಬೈಲು ಸಿದ್ದಪ್ಪಗೌಡ ಅವರ ಗದ್ದೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುದುರೆಗುಂಡಿ ವಲಯದ ಬೆಳ್ಳೂರು ಕಾರ್ಯಕ್ಷೇತ್ರದ ಆಶ್ರಯದಲ್ಲಿ ನಡೆದ ಯಾಂತ್ರೀಕೃತ ಶ್ರೀ ಪದ್ಧತಿ ಭತ್ತದ ಬೇಸಾಯದ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿ, ಯಾಂತ್ರೀಕೃತ ಶ್ರೀ ಪದ್ಧತಿಯಿಂದ ಹೆಚ್ಚು ಇಳುವರಿ ಪಡೆಯಬಹುದು. ಈ ಪದ್ಧತಿಯಿಂದ ರೈತರಿಗೆ ಸಾಕಷ್ಟು ಸಹಾಯವಾಗಲಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಅವರು ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯ, ಕೀಟ ನಾಶಕಗಳ ನಿರ್ವಹಣೆ ವಿವರಿಸಿದರು.
ಅಜೆಕಾರಿನ ಯಂತ್ರಶ್ರೀ ಬ್ಯಾಂಕಿನ ಮೇಲ್ವಿಚಾರಕ ರಾಘವೇಂದ್ರ ಅವರು ಯಂತ್ರಶ್ರೀ ಬೇಸಾಯದ ಪದ್ಧತಿಯಿಂದ ಆಗುವ ಪ್ರಯೋಜನ, ಬೀಜೋಪಚಾರ ಹಾಗೂ ಯಂತ್ರದ ನಾಟಿಯಿಂದ ಆಗುವ ಪ್ರಯೋಜನದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.
ಸೀತೂರು ಗ್ರಾಪಂ ಸದಸ್ಯರಾದ ಸಿದ್ದಪ್ಪಗೌಡ, ಕವಿತಾ, ಧ.ಗ್ರಾ.ಯೋಜನೆ ಕೃಷಿ ಮೇಲ್ವಿಚಾರಕ ಶಿವಕುಮಾರ್, ಸೇವಾಪ್ರತಿನಿಧಿ ಕೃಷ್ಣಮೂರ್ತಿ, ಸಿಎಚ್‌ಎಸ್‌ಸಿ ಯೋಜನಾಧಿಕಾರಿ ಪ್ರಕಾಶ್, ಇಂಜಿನಿಯರ್ ಅವಿನಾಶ್, ಶೇಖರ ಶೆಟ್ಟಿ, ಮಮತಾ, ಸುಧೀೀರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net