‘ಮಹಿಳಾ ಸಮ್ಮಾನ್’ ಯೋಜನೆಯಿಂದ ಅನುಕೂಲ

LXR anche
Published on

ಲಕ್ಷ್ಮೇಶ್ವರ: ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ತುಂಬ ಅನುಕೂಲಕರವಾಗಿದ್ದು ಮಹಿಳೆಯರು ಸದುಪಯೋಗಪಡೆದುಕೊಳ್ಳಬೇಕು ಎಂದು ಗದಗ ಅಂಚೆ ವಿಭಾಗದ ಅಧೀಕ್ಷಕ ಚಿದಾನಂದ ಪದ್ಮಶಾಲಿ ಹೇಳಿದರು.

ಪಟ್ಟಣದ ಅಂಚೆ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳಾ ಸಮ್ಮಾನ ಉಳಿತಾಯ ಗ್ರಾಮಗಳ ಘೋಷಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಯಸ್ಸಿನ ಮಿತಿಯಿಲ್ಲದೆ ಕನಿಷ್ಠ ಒಂದು ಸಾವಿರದಿಂದ ಗರಿಷ್ಠ ಎರಡು ಲಕ್ಷ ರೂ.ವರೆಗೆ ಯಾವುದೇ ಅಂಚೆ ಕಚೇರಿಯಲ್ಲಿ ತೊಡಗಿಸಬಹುದು. ಅದಕ್ಕೆ ಶೇ.7.5ರಷ್ಟು ವಾರ್ಷಿಕ ಬಡ್ಡಿ ನೀಡಲಾಗುವುದು. ಯೋಜನೆಯು ಕೇವಲ ಎರಡು ವರ್ಷದ ಅವಧಿಯವರೆಗೆ ಜಾರಿಯಲ್ಲಿದ್ದು 2025ರ ಮಾ.31ಕ್ಕೆ ಮುಕ್ತಾಯಗೊಳ್ಳುತ್ತದೆ ಎಂದರು.

ಹೊಸ ಖಾತೆಗಳನ್ನು ತೆಗೆದು ಹಣ ತೊಡಗಿಸಿದ ಮಹಿಳೆಯರಿಗೆ ಪಾಸ್‌ಬುಕ್ ವಿತರಿಸಲಾಯಿತು.

ಗದಗ ಅಂಚೆ ಉಪ ವಿಭಾಗದ ಸಹಾಯಕ ಅಧೀಕ್ಷಕ ಶ್ರೀಕಾಂತ್ ಜಾಧವ್ ಅವರು ಯೋಜನೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಷ್ಮೇಶ್ವರ ಅಂಚೆ ಪಾಲಕ ದೊಡ್ಡಪ್ಪ ಇಟಗಿ ವಹಿಸಿದ್ದರು. ವನಜಾಕ್ಷಿ ಬ್ಯಾಲಹುಣಸಿ, ಶರಣಯ್ಯ ಹಿರೇಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net