ಫಲಾನುಭವಿಗಳ ಸಮಾವೇಶ,ಹರ್ತಿಕೋಟೆಗೆ ಡಿಸಿ ಭೇಟಿ

IMG-20230321-WA0014-07
Published on

ಚಿತ್ರದುರ್ಗ: ತಾಂಡಾ, ಹಾಡಿ, ಹಟ್ಟಿ ಮುಂತಾದ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿಸಲಾಗಿದ್ದು, ಚಿತ್ರದುರ್ಗ ಸೇರಿ ರಾಜ್ಯದ 9 ಜಿಲ್ಲೆಗಳ ಇಂತಹ ಗ್ರಾಮಗಳ 50 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಸಮಾರಂಭ ಹಿರಿಯೂರು ತಾಲೂಕು ಹರ್ತಿಕೋಟೆ ಗ್ರಾಮದ ಬಳಿ ಮಾ.27ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಂಡಾ, ಹಾಡಿ, ಗೊಲ್ಲರಹಟ್ಟಿ, ಹಟ್ಟಿ ಸೇರಿದಂತೆ ವಿವಿಧ ಜನವಸತಿ ಪ್ರದೇಶಗಳನ್ನು ಸರ್ಕಾರದಿಂದ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿ ಸಲಾಗಿದೆ. ಚಿತ್ರ ದುರ್ಗ,ತುಮಕೂರು, ವಿಜಯನಗರ, ಹಾವೇರಿ, ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿರುವ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ.

ಸಮಾರಂಭಕ್ಕಾಗಿ ಬೃಹತ್ ವೇದಿಕೆ,ಪಾರ್ಕಿಂಗ್,ಹೆಲಿಪ್ಯಾಡ್,ಕೌಂಟರ್ ಇತ್ಯಾದಿ ಪರಿಶೀಲನೆ ಸಿದ್ಧತೆ ಕಾರ್ಯಗಳನ್ನು ಡಿಸಿ ಪರಿಶೀಲಿಸಿದರು. ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ಚಂದ್ರಯ್ಯ, ಹಿರಿಯೂರು ತಹಸೀಲ್ದಾರ್ ಪ್ರಶಾಂಶ್ ಪಾಟೀಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net