ಬೇಂದ್ರೆ ಸಾಹಿತ್ಯದಲ್ಲಿ ಮಿಂದೆದ್ದರೆ ಪರಿಪಕ್ವತೆ

BENDRE NEW
Published on

ಹುಬ್ಬಳ್ಳಿ : ವರಕವಿ ಡಾ. ದ.ರಾ. ಬೇಂದ್ರೆಯವರ ಸಾಹಿತ್ಯ ಮನುಕುಲಕ್ಕೆ ಅಂಟಿದ ಮೈಲಿಗೆ ತೊಳೆಯುವ ಗಂಗೆಯಾಗಿದೆ. ಆ ಗಂಗೆ ಎಂದೂ ಅಶಕ್ತವಾಗುವುದಿಲ್ಲ. ಅದರಲ್ಲಿ ಮಿಂದೆದ್ದರೆ ಮಾತ್ರ ಮನುಷ್ಯ ಪರಿಪಕ್ವನಾಗುತ್ತಾನೆ ಎಂದು ಗದಗಿನ ಶ್ರೀ ಶಿವಾನಂದ ಬೃಹನ್ಮಠದ ಜಗದ್ಗುರು ಶ್ರೀ ಸದಾಶಿವಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ಗೋಕುಲ ರಸ್ತೆಯ ಬಸವೇಶ್ವರನಗರದ ಡಾ.ಕೆ.ಎಸ್.ಶಮಾ ಕ್ಯಾಂಪಸ್​ನ ವಿಶ್ವಶ್ರಮ ಚೇತನದಲ್ಲಿ ಸಂಜೀವಿನಿ ಆಯುರ್ವೆದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಡಾ. ಕೆ.ಎಸ್. ಶರ್ಮಾ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಡಾ.ಕೆ.ಎಸ್. ಶರ್ಮಾ ಅವರ 90ನೇ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿರುವ ಡಾ.ದ.ರಾ.ಬೇಂದ್ರೆ ಸಾಹಿತ್ಯ ಸಪ್ತಾಹ ಅಂಗವಾಗಿ ಕಾರ್ಯಕ್ರಮದ ಏಳನೇ ದಿನವಾದ ಶುಕ್ರವಾರದಂದು ಸಾಹಿತ್ಯ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಇಂದಿನ ಯುವಕರಲ್ಲಿ ಬೇಂದ್ರೆ ಸಾಹಿತ್ಯ ಅರ್ಥೈಸುವ ಶಬ್ದಕೋಶದ ಕೊರತೆ, ಅಭಿರುಚಿ, ಆಶಯದ ಕೊರತೆ ಎದ್ದು ಕಾಣುತ್ತಿದ್ದು, ಇದು ದುರಂತದ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವರಕವಿ ಡಾ. ದ.ರಾ.ಬೇಂದ್ರೆಯವರ ಜೀವನ ಅವರ ಮಹಾಕಾವ್ಯ ಔದುಂಬರಗಾಥೆ ಇದ್ದಂತೆ, ಅವರ ಮಹಾಕಾವ್ಯವು ವಿಶ್ವಸಾಹಿತ್ಯಕ್ಕೆ ನೀಡಿದ ವಿನೂತನ ಕೊಡುಗೆಯಾಗಿದೆ ಎಂದು ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳದ ಅಧ್ಯಕ್ಷ ಡಾ.ಕೆ.ಎಸ್.ಶರ್ಮಾ ಹೇಳಿದರು.

ಮಹಾವಿದ್ಯಾಲಯದ ಚೇರ್ಮನ್ ಮೋಹನ ಲಿಂಬಿಕಾಯಿ ಮಾತನಾಡಿ, ಡಾ.ಕೆ.ಎಸ್. ಶರ್ಮಾ ಅವರು ಬೇಂದ್ರೆಯವರ ಮಾನಸ ಪುತ್ರರಾಗಿದ್ದಾರೆ. ತಮ್ಮ ಜೀವನದುದ್ದಕ್ಕೂ ದೀನ ದಲಿತರು, ದಿನಗೂಲಿ ನೌಕರರ ಪರವಾಗಿ ಹೋರಾಟ ಮಾಡಿ ಸುಮಾರು 64 ಸಾವಿರ ದಿನಗೂಲಿ ನೌಕರರಿಗೆ ದಾರಿ ದೀಪವಾಗಿದ್ದಾರೆ. ಡಾ.ಕೆ.ಎಸ್.ಶರ್ಮಾ ಅವರು ಬಹುಮುಖ ಪ್ರತಿಭೆಯಾಗಿದ್ದಾರೆ ಎಂದರು.

ಮನೋವೈದ್ಯರಾದ ಲೇಖಕಿ ಡಾ. ಕೆ.ಎಸ್. ಪವಿತ್ರಾ ಅವರು, ಡಾ. ಬೇಂದ್ರೆಯವರ ನೃತ್ಯಾನುಸಂಧಾನ ಉಪನ್ಯಾಸ ಪ್ರಾತ್ಯಕ್ಷಿಕೆ ನೀಡಿದರು.

ಮುಖ್ಯ ಆಡಳಿತಾಧಿಕಾರಿ ಡಾ. ಶ್ರೀನಿವಾಸ ಬನ್ನಿಗೋಳ, ಪ್ರಾಂಶುಪಾಲ ಡಾ. ಚರಂತಯ್ಯ ಹಿರೇಮಠ, ಸುಮಿತ್ರಾ ಪೊತ್ನಿಸ್, ಪ್ರೊ. ರವೀಂದ್ರ ಶಿರಳ್ಕೋರ್, ಡಾ. ಸೋಮಶೇಖರ ಹುದ್ದಾರ, ಡಾ. ಮಹೇಶ ದೇಸಾಯಿ, ಸಂಜಯ ತ್ರಾಸದ, ಪುನರ್ವಸು ಬೇಂದ್ರೆ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net