ಬೆಂದೂರ್‌ವೆಲ್ 17ನೇ ಮಹಡಿಯಿಂದ ಜಿಗಿದು ಉದ್ಯಮಿ ಆತ್ಮಹತ್ಯೆ

mng--6 Aug Mohan Ameen
Published on

ಮಂಗಳೂರು: ನಗರದ ಬೆಂದೂರ್‌ವೆಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಿಂದ ನೆಲಕ್ಕೆ ಹಾರಿ ಉದ್ಯಮಿಯೊಬ್ಬರು ಭಾನುವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಮೂಲತಃ ವಾಮಂಜೂರು ಪರಾರಿ ನಿವಾಸಿ, ಪ್ರಸ್ತುತ ಬೆಂದೂರ್‌ವೆಲ್‌ನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಮೋಹನ್ ಅಮೀನ್ (67) ಆತ್ಮಹತ್ಯೆಗೆ ಶರಣಾದವರು.


ಭಾನುವಾರ ಬೆಳಗ್ಗೆ 8ಗಂಟೆಗೆ ಮಲ್ಲಿಕಟ್ಟೆಯಲ್ಲಿರುವ ತನ್ನ ಕಚೇರಿಗೆ ಹೋಗಿ 8.30ರ ಸುಮಾರಿಗೆ ಮರಳಿದ್ದಾರೆ. ಬಳಿಕ ತನ್ನ ಪ್ಲಾೃಟ್‌ಗೆ ಹೋಗಿ ಆತ್ಮೀಯ 5 ಮಂದಿ ಮಿತ್ರರಿಗೆ ಕರೆ ಮಾಡಿ 9.30ರ ಸುಮಾರಿಗೆ ್ಲ್ಯಾಟ್‌ಗೆ ಬರುವಂತೆ ವಿನಂತಿ ಮಾಡಿದ್ದಾರೆ. ಇದಾದ ಬಳಿಕ ಅಪಾರ್ಟ್‌ಮೆಂಟ್‌ನ ಅಂತಿಮ 17ನೇ ಮಹಡಿಗೆ ಹೋಗಿ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಮೃತರ ಪರ್ಸ್‌ನಲ್ಲಿ ಡೆತ್‌ನೋಟು ಸಿಕ್ಕಿದ್ದು ಅದರಲ್ಲಿ ‘ನನ್ನ ಸಾವಿಗೆ ನಾನೇ ಕಾರಣ. ನನ್ನ ಪತ್ನಿ ಮತ್ತು ಪುತ್ರ ಒಳ್ಳೆಯವರು. ಮಾನಸಿಕ ಖಿನ್ನತೆಗೊಳಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನನ್ನು ಕ್ಷಮಿಸಿ’ ಎಂದು ಬರೆದಿದ್ದಾರೆ.


ಇವರಿಗೆ ಪತ್ನಿ, ಪುತ್ರ ಇದ್ದಾರೆ. ಪುತ್ರ ಸಿಂಗಾಪುರ ಪ್ರವಾಸಕ್ಕೆ ತೆರಳಿದ್ದು, ಸೋಮವಾರ ಮರಳಿ ಬಂದ ಬಳಿಕ ಮೃತರ ಅಂತ್ಯ ಸಂಸ್ಕಾರ ನಡೆಯಲಿದೆ. ಬೆಳಗ್ಗೆ ಮೂಲ ಮನೆ ಪರಾರಿಗೆ ಮೃತದೇಹ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇವರ ಪುತ್ರ ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದವರು ಅಲ್ಲಿಂದ ಬಿಟ್ಟು ಬಂದು 3 ವರ್ಷದಿಂದ ತಂದೆಯ ಜತೆ ವ್ಯವಹಾರ ನೋಡಿಕೊಂಡಿದ್ದರು. ಅಮೇರಿಕಾದಲ್ಲಿದ್ದ ಸ್ನೇಹಿತನ ಜತೆ ಸಿಂಗಾಪುರ ಪ್ರವಾಸಕ್ಕೆ ತೆರಳಿದ್ದಾರೆ.


ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net