ಬೆಂಡಿ ಬೀಜ ಬೆಳೆದು ಕೊಟ್ಟ ರೈತನಿಗೆ ಹಣ ಕೊಡದೆ ಮೋಸ

Crime Logo
Published on

ರಾಣೆಬೆನ್ನೂರ: ಬಿತ್ತನೆ ಬೆಂಡಿ ಬೀಜ ಬೆಳೆದು ಕೊಟ್ಟ ವ್ಯಕ್ತಿಗೆ ಬೀಜ ಮಾರಾಟ ಕಂಪನಿ 36.89 ಲಕ್ಷ ರೂ. ಹಣ ಕೊಡದೆ ಮೋಸ ಮಾಡಿರುವ ಕುರಿತು ಇಲ್ಲಿಯ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಹೈದರಾಬಾದ್​ನ ವಿನಿವೆಜ್​ ಸೀಡ್ಸ್​ ಟೆಕ್ನೋಜಿಸ್​ ಪೆವೆಟ್​ ಲಿಮಿಟೆಡ್​ನ ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ ಹನುಮಂತರಾವ್​, ಕೇಸ್​ ವರ್ಕರ್​ ನರೇಂದ್ರ ಸೋನಂಕಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿರುವುದು.
ಇವರ ವಿರುದ್ಧ ತಾಲೂಕಿನ ಗುಡಿಹೊನ್ನತ್ತಿ ಗುರುಬಸಯ್ಯ ಮಾಂತಯ್ಯ ವಿರಕ್ತಮಠ ಎಂಬುವರು ದೂರು ನೀಡಿದ್ದಾರೆ.
ಆರೋಪಿತರು ಬೆಂಡಿ ಬೀಜ ಬೆಳೆದುಕೊಡುವ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ 36.89 ಲಕ್ಷ ರೂ. ಬೆಲೆಯ 7096 ಕೆ.ಜಿ. ಬೆಂಡಿ ಬೀಜ ಬೆಳೆದು ಕೊಟ್ಟಿದ್ದೇನೆ. ಆದರೆ, ನನಗೆ ಅದರ ಹಣ ಕೊಡದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net