ಕೆಎಲ್‌ಇ ಹೋಮಿಯೋಪಥಿಕ್ ಕಾಲೇಜಿನಿಂದ ಬೆಂಚ್ ವಿತರಣೆ

02-Jaggu-4.jpg
Published on

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ 76ನೇ ಜನ್ಮದಿನದ ನಿಮಿತ್ತ ಕೆಎಲ್‌ಇ ಹೋಮಿಯೋಪಥಿಕ್ ಕಾಲೇಜಿ ವತಿಯಿಂದ ಬಸವನ ಕುಡಚಿಯ ಶತಮಾನ ಕಂಡ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಬೆಂಚ್‌ಗಳನ್ನು ವಿತರಿಸಲಾಯಿತು.
 ಶಾಲೆಯಲ್ಲಿ 1ರಿಂದ 4ನೇ ತರಗತಿವರೆಗೆ ವಿದ್ಯಾರ್ಥಿಗಳು ಓದುತ್ತಿದ್ದು, ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದರು. ಈ ಸಮಸ್ಯೆ ಅರಿತ ಕೆಎಲ್‌ಇ ಹೋಮಿಯೋಪಥಿಕ್ ಕಾಲೇಜಿನ ಪ್ರಾಚಾರ್ಯ ಡಾ.ಮುಕುಂದ ಉಡಚಕರ ಅವರು ಡಾ. ಪ್ರಭಾಕರ ಕೋರೆ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಕೋರೆ ಅವರು ಬೆಂಚ್‌ಗಳನ್ನು ವಿತರಿಸುವಂತೆ ತಿಳಿಸಿದ್ದರು. ಹೀಗಾಗಿ ಅವರ ಜನ್ಮದಿನದ ಸಂದರ್ಭದಲ್ಲಿ ಬೆಂಚ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳು ಸಂತಸ ವ್ಯಕ್ತಪಡಿಸಿದರು.
 ಶಾಲೆ ಶಿಕ್ಷಕ ತುಬಾಕೆ, ಕೆಎಲ್‌ಇ ಹೋಮಿಯೋಪಥಿಕ್ ಕಾಲೇಜಿನ ಪ್ರಾಚಾರ್ಯ ಡಾ.ಮುಕುಂದ ಉಡಚಕರ, ಕಾಲೇಜಿನ ವಿದ್ಯಾರ್ಥಿಗಳು ಇದ್ದರು. ಬಳಿಕ ಕಾಲೇಜಿನ ವತಿಯಿಂದ ಬೆಳಗಾವಿ ಪಾಗೋಳ ಗಲ್ಲಿಯ ಜೈನ ಮಂದಿರದ ಹತ್ತಿರ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿಸಿತು. 150ಕ್ಕೂ ಹೆಚ್ಚು ರೋಗಿಗಳು ಶಿಬಿರದ ಲಾಭ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net