ಭಾವೈಕ್ಯಕ್ಕೆ ಬೆನಕನ ಸಾಕ್ಷಿ

25mjr1
Published on

ಮಾಂಜರಿ: ಸಮೀಪದ ಮಾಂಜರವಾಡಿ ಗ್ರಾಮದ ಮುಸ್ಲಿಂ ಕುಟುಂಬವೊಂದು ಗಣೇಶನ ಮೂರ್ತಿ ತಯಾರಿಸುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ೮೦ ವರ್ಷಗಳಿಂದ ಗಣೇಶ ಮೂರ್ತಿ ತಯಾರಿ, ಮಾರಾಟದಲ್ಲಿ ತೊಡಗಿಕೊಂಡಿರುವ ಜಮಾದಾರ್ ಕುಟುಂಬದವರು ಕೋಮು ಸೌಹಾರ್ದ ವೃದ್ಧಿಸುವ ಕಾರ್ಯ ಮಾಡುತ್ತಿದೆ.

ಗಣೇಶ ಚತುರ್ಥಿಗೂ ಎರಡು ತಿಂಗಳು ಮೊದಲು ಜಮಾದಾರ್ ಕುಟುಂಬಸ್ಥರು ಗಣೇಶ ಮೂರ್ತಿ ತಯಾರಿಸುವ ಕಾಯಕದಲ್ಲಿ ತೊಡಗುತ್ತಾರೆ. ಒಬ್ಬರು ಮಣ್ಣು ಹದ ಮಾಡಿದರೆ, ಇನ್ನೊಬ್ಬರು ಮೂರ್ತಿಯ ಸೊಂಡಿಲು, ಕೈ, ಕಿರೀಟ ರಚಿಸುತ್ತಾರೆ. ಮನೆಯ ಹೆಣ್ಣುಮಕ್ಕಳೂ ಈ ಪ್ರಕ್ರಿಯೆಯಲ್ಲಿ ಕೈಜೋಡಿಸುತ್ತಾರೆ.

ಅಲ್ಲಾಭಕ್ಷ-ರೇಷ್ಮಾ ದಂಪತಿ, ಮೊಹಮ್ಮದ್-ಅಫ್ಹ್ಸಾನ ದಂಪತಿ, ಪುತ್ರರಾದ ನಿಯಾಜ್, ಅಮನ್ ಹೀಗೆ ಇಡೀ ಕುಟುಂಬದವರು ಪ್ರತಿ ವರ್ಷ ೨೫೦ ರಿಂದ ೩೦೦ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ.

ಈ ಗಣೇಶನ ಮೂರ್ತಿಗಳನ್ನು ಮಾಂಜರಿ, ಯಡೂರ, ಯಡೂರವಾಡಿ, ಶಿರಗುಪ್ಪಿ ಮತ್ತು ಸುತ್ತಮುತ್ತಲಿನ ಹಳ್ಳಿಗರು ಕೊಂಡೊಯ್ಯುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net