ಉದ್ಯೋಗ ಮೇಳ 13ರಂದು

job fair
Published on

ಹುಬ್ಬಳ್ಳಿ: ಗೋಕುಲ ರಸ್ತೆ ವಿವೇಕಾನಂದನಗರದ (ರಾಮಲಿಂಗೇಶ್ವರನಗರದ ಬಳಿ) ಬೆನಕ ಪಪೂ ಕಾಲೇಜಿನಲ್ಲಿ ಏ. 13ರಂದು ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನ 3.30ರವರೆಗೆ ಕರಾವಳಿ ಟೀಚರ್ಸ್ ಹೆಲ್ಪ್​ಲೈನ್ ಸಹಯೋಗದೊಂದಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಉದ್ಯೋಗಾಕಾಂಕ್ಷಿ ಯುವಕ-ಯುವತಿಯರು ನೇರ ಸಂದರ್ಶನದ ಮೂಲಕ ಶಿಕ್ಷಣ ಸಂಸ್ಥೆ, ಬ್ಯಾಂಕ್, ಎನ್​ಎಂಸಿ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ಪಿಯುಸಿ, ಡಿ.ಇಡಿ, ಬಿ.ಇಡಿ, ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ, ಬಿಸಿಎ, ಎಂಎ, ಎಂಕಾಂ, ಎಂಬಿಎ, ಐಟಿಐ, ಡಿಪ್ಲೊಮಾ, ಬಿಇ ಇನ್ನಿತರ ಪದವೀಧರರು ಹಾಜರಾಗಬಹುದು ಎಂದು ಕಾಲೇಜ್ ಪ್ರಾಚಾರ್ಯು ಡಾ. ಶೈಲಜಾ ನಾಯಕ ತಿಳಿಸಿದ್ದಾರೆ. ಕನಿಷ್ಠ 50 ಹುದ್ದೆಗಳಿಗೆ ಆಯ್ಕೆ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳು, ಆಧಾರ್ ಕಾರ್ಡ್, 2 ಪಾಸ್​ಪೋರ್ಟ್ ಸೈಜಿನ ಭಾವಚಿತ್ರದೊಂದಿಗೆ ಹಾಜರಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net