ಬೆನಕಾ ವಿದ್ಯಾ ಮಂದಿರ, ಸಾಖರೆ ಪ್ರಥಮ

benaka
Published on

ಹುಬ್ಬಳ್ಳಿ: ನಗರದ ಚಿನ್ಮಯ ಸಮೂಹ ಸಂಸ್ಥೆಯ ಚಿನ್ಮಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಆಯೋಜಿಸಿದ್ದ ಅಂತರ ಶಾಲಾ ವಾಲಿಬಾಲ್ ಟೂರ್ನಿಯ ಬಾಲಕರ ವಿಭಾಗದ ಬೆನಕಾ ವಿದ್ಯಾಮಂದಿರ ಹಾಗೂ ಬಾಲಕಿಯರ ವಿಭಾಗದಲ್ಲಿ ಎಂ.ಆರ್. ಸಾಖರೆ ಪ್ರಥಮ ಸ್ಥಾನ ಪಡೆದಿವೆ.

ತಲಾ 5 ಸಾವಿರ ರೂ. ನಗದು ಬಹುಮಾನ ವಿತರಿಸಲಾಯಿತು. ಬಾಲಕರಲ್ಲಿ ಸೇಂಟ್ ಪೌಲ್ ಶಾಲೆ ಹಾಗೂ ಬಾಲಕಿಯರಲ್ಲಿ ಫಾತಿಮಾ ಶಾಲೆ ದ್ವಿತೀಯ ಸ್ಥಾನ ಹಾಗೂ ತಲಾ 3 ಸಾವಿರ ನಗದು ಬಹುಮಾನ ಪಡೆದವು. ಚಿನ್ಮಯ ಜೋಶಿ-ಜಾಹ್ನವಿ ಎಂ. ಉತ್ತಮ ಡಿಪೆಂಡರ್ ಹಾಗೂ ಯಶ ಹುಬ್ಬಳ್ಳಿ-ಹರ್ಷಿತಾ ಮದ್ದಾಪೂರ ಉತ್ತಮ ಪಾಸರ್ ಬಹುಮಾನ ಪಡೆದರು. ಬಾಲಕರ ವಿಭಾಗದಲ್ಲಿ 22 ಹಾಗೂ ಬಾಲಕಿಯರ ವಿಭಾಗದಲ್ಲಿ 16 ಶಾಲಾ ತಂಡಗಳು ಪಾಲ್ಗೊಂಡಿದ್ದವು. ಹೊನಲು ಬೆಳಕಿನ ವ್ಯವಸ್ಥೆಯಲ್ಲಿ ಪಂದ್ಯಾವಳಿ ನಡೆಸಲಾಯಿತು.

ಪ್ರದೀಪ ಜೋಶಿ ಅವರು ಪ್ರಥಮ ಸ್ಥಾನ ಗಳಿಸಿದ ತಂಡಗಳಿಗೆ ವೈಯಕ್ತಿಕವಾಗಿ ತಲಾ 2500 ರೂ. ಬಹುಮಾನ ನೀಡಿದರು. ವಾಲಿಬಾಲ್ ಟ್ರೇನರ್ ಶಶಿಕಲಾ ನಾಯ್ಡು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net