ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಬೆಮುಲ್ ಪ್ರಯತ್ನ

5GKK3
Published on

ಗೋಕಾಕ: ಬಿಪಿಎಲ್ ಪಡಿತರ ಚೀಟಿವುಳ್ಳ ಮಹಿಳೆಯರಿಗಾಗಿ ಕ್ಷೀರ ಸಂಜೀವಿನಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ( ಬೆಮುಲ್) ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ನಗರದ ಸ್ವಗೃಹ ಕಚೇರಿಯಲ್ಲಿ ಜಿಲ್ಲಾ ಹಾಲು ಉತ್ಪಾದಕರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಲಾನುಭವಿಗಳಿಗೆ 23.14 ಲಕ್ಷ ರೂ. ಮೊತ್ತದ ಚೆಕ್ ವಿತರಿಸಿ ಮಾತನಾಡಿದರು. ಮಹಿಳಾ ಸಮುದಾಯವೂ ಮುಖ್ಯವಾಹಿನಿಗೆ ಬರಬೇಕು. ಅವರ ಆರ್ಥಿಕ ಸಬಲೀಕರಣಕ್ಕೆ ಈ ಯೋಜನೆ ತರಲಾಗಿದೆ. ನಮ್ಮ ನೇತತ್ವದ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಅಧಿಕಾರದಲ್ಲಿದ್ದು, ರೈತ ಸಮುದಾಯದ ಅಭಿವದ್ಧಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಒಕ್ಕೂಟಕ್ಕೆ ಹಾಲು ಪೂರೈಸುವ ರೈತರಿಗೆ 20 ದಿನಗಳಲ್ಲಿ ಬಿಲ್ ಸಂದಾಯ ಮಾಡುತ್ತಿದ್ದೇವೆ. ರೈತರು ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡುವಂತೆ ಮನವಿ ಮಾಡಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ರೈತ ಕಲ್ಯಾಣ ಸಂಘದ ವತಿಯಿಂದ ತಲಾ 20 ಸಾವಿರ ರೂ. ಗಳಂತೆ ಒಟ್ಟು 17 ಲಾನುಭವಿಗಳಿಗೆ 3.40 ಲಕ್ಷ ರೂ, ಕ್ಷೀರ ಸಂಜೀವಿನಿ 4 ರ ಹಂತದಲ್ಲಿ ನಯ ಅರಳಿಮಟ್ಟಿಯ ಮಡ್ಡಿ ಮಹಿಳಾ ಹಾಲು ಉತ್ಪಾದಕರ ಸಂಘ, ರಡ್ಡರಟ್ಟಿ ಲಕ್ಷ್ಮೀ ನಗರ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಮೇಲ್ಮಟ್ಟಿಯ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹೈನು ಖರೀದಿಗಾಗಿ ತಲಾ 6.58 ಲಕ್ಷ ರೂಪಾಯಿ ಸೇರಿ 19.74 ಲಕ್ಷ ರೂ. ಚೆಕ್ ವಿತರಿಸಿದರು.

ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರಾದ ಮಲ್ಲಪ್ಪ ಪಾಟೀಲ, ಸವಿತಾ ಖಾನಪ್ಪಗೋಳ, ಮುತ್ತೆಪ್ಪ ಖಾನಪ್ಪಗೋಳ, ಭರಮಣ್ಣ ಪಾಶ್ಚಾಪುರ, ಗೋಕಾಕ ಉಪ ವ್ಯವಸ್ಥಾಪಕ ಡಾ.ವೀರಣ್ಣ ಕೌಜಲಗಿ, ಕ್ಷೀರ ಸಂಜೀವಿನಿ ಅಧಿಕಾರಿ ಮಲಪ್ರಭಾ ಗಾಣಗಿ, ಪಾಂಡು ನಂದಿ, ಗೋಪಾಲ ಭಂಡಾರಿ, ವಿಠ್ಠಲ ಲೋಕುರಿ, ಸಚಿನ ಪಡದಲ್ಲಿ, ಸಂಘಗಳ ಸದಸ್ಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net