

ಮಡಿಕೇರಿ: ನಿವೃತ್ತ ಡೆಪ್ಯುಟಿ ರೇಂಜ್ ಫಾರೆಸ್ಟರ್, ಕೊಡವ ಜಾನಪದ ಪದ್ಧತಿ ಪರಂಪರೆಗಳ ಕುರಿತು ಮೂರು ಪುಸ್ತಕ ಬರೆದಿರುವ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಮಡಿಕೇರಿಯ ಪುಟಾಣಿ ನಗರ ನಿವಾಸಿ ಪಂಜೇರಿರ ಬೆಳ್ಯಪ್ಪ ಜ.೫ ರಂದು ಮೈಸೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಜ.೬ ರಂದು ಮಡಿಕೇರಿಯ ಕೊಡವ ಸಮಾಜದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಮೃತರು ಪತ್ನಿ ಕಾಮವ್ವ, ಪುತ್ರರಾದ ಜಗದೀಶ್ ಬೆಳ್ಯಪ್ಪ, ರಾಜೇಶ್, ಪುತ್ರಿ ಜರಿತಾ ಅವರನ್ನು ಅಗಲಿದ್ದಾರೆ.