ಬೆಳುವಲ ಪ್ರಕಾಶನದ ಸೇವೆ ಅನನ್ಯ

18GKK1
Published on

ಗೋಕಾಕ: ಕನ್ನಡ ನಾಡು, ನುಡಿ, ಕಲೆ ಹಾಗೂ ಸಾಹಿತ್ಯ ಸೇವೆಗೈದ ಮಹನೀಯರನ್ನು ಗುರುತಿಸಿ ಗೌರವಿಸುತ್ತಿರುವ ಬೆಳುವಲ ಪ್ರಕಾಶನದ ಸೇವೆ ಅನನ್ಯವಾಗಿದೆ ಎಂದು ಕಲ್ಲೋಳಿಯ ರಾಮಲಿಂಗೇಶ್ವರ ಶಿಣ ಸಂಸ್ಥೆ ಚೇರ್ಮನ್​ ಬಸನಗೌಡ ಪಾಟೀಲ ಹೇಳಿದರು.

ನಗರದ ಬಸವ ಮಂದಿರದಲ್ಲಿ ಬಳೋಬಾಳದ ಬೆಳುವಲ ಪ್ರಕಾಶನ ಆಶ್ರಯದಲ್ಲಿ ದಿ.ಭೀಮಪ್ಪ ಬಾಳಪ್ಪ ಹನಗಂಡಿ ಸ್ಮರಣಾರ್ಥ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಬೆಳುವಲ ಸಿರಿ ಪ್ರಶಸ್ತಿ ಪ್ರದಾನ ಹಾಗೂ ಡಾ.ಸುರೇಶ ಹನಗಂಡಿ ಅವರ ಶರಣ ಸಾಹಿತ್ಯ ಅವಲೋಕನ ಕೃತಿ ಬಿಡುಗಡೆ ಕಾರ್ಯಕ್ರಮಲ್ಲಿ ಮಾತನಾಡಿದರು.

ನಿವೃತ್ತ ಪ್ರಾಚಾರ್ಯ ಡಾ.ವೈ.ಎಂ.ಯಾಕೊಳ್ಳಿ ಮಾತನಾಡಿದರು. ದಿ.ಭೀಮಪ್ಪ ಬಾಳಪ್ಪ ಹನಗಂಡಿ ಸ್ಮರಣಾರ್ಥ ಮಹಾಲಿಂಗ ಮಂಗಿ, ಎ.ವೈ.ಪಂಗಣ್ಣವರ, ಸಂಗಮೇಶ ಗುಜಗೊಂಡ, ಪ್ರಕಾಶ ಕೋಟಿನತೋಟ, ಎಂ.ಪಿ.ಕೊಣ್ಣೂರು, ಭರಮಗೌಡ ಪಾಟೀಲ, ಲ$್ಮಣ ಚೌರಿ, ಡಾ.ಆರ್​.ಎನ್​.ಪಾಟೀಲ, ಜಿ.ಕೆ.ಕಾಡೇಶಕುಮಾರ. ಈಶ್ವರಚಂದ್ರ ಬೆಟಗೇರಿ, ಮಲ್ಲಪ್ಪ ಜೋತಾವರ, ಶಕುಂತಲಾ ದಂಡಗಿ, ಭಾರತಿ ಮದಭಾವಿ, ರಜನಿ ಜೀರಗ್ಯಾಳ, ಬಸವರಾಜ ಖಾನಪ್ಪನವರ, ಬಸಪ್ಪ ಬಡವಣ್ಣಿ ಅವರಿಗೆ ಬೆಳುವಲ ಸಿರಿ ಪ್ರಶಸ್ತಿ ನೀಡಲಾಯಿತು. ಕೃತಿಕಾರ ಡಾ.ಸುರೇಶ ಹನಗಂಡಿ, ವಕೀಲ ಬಿ.ಡಿ.ಪಾಟೀಲ, ಶಸಾಪ ಅಧ್ಯ ಮಹಾಂತೇಶ ತಾಂವಶಿ, ಜಿ.ಕೆ.ಕಾಡೇಶಕುಮಾರ, ವಿಮರ್ಶಕ ಡಾ.ಆನಂದ ಜಕ್ಕಣ್ಣವರ ಇತರರಿದ್ದರು. ರಮೇಶ ಮಿರ್ಜಿ ನಿರೂಪಿಸಿದರು. ನಿಂಗಪ್ಪ ಸಂಗ್ರೇಜಿಕೊಪ್ಪ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net