ಪಕ್ಷಾತೀತವಾಗಿ ಎಲ್ಲರೂ ಸಹಕಾರ ನೀಡಿ

IMG-20240625-WA0032
Published on
  • ಬೇಲೂರು : ಬೇಲೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲುಪಕ್ಷಾತೀತವಾಗಿ ಎಲ್ಲರೂ ಸಹಕಾರ ನೀಡಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು. ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಕೆಂಪೇಗೌಡ ಜಯಂತಿ ಅಂಗವಾಗಿ ಒಕ್ಕಲಿಗ ಮುಖಂಡರೊಂದಿಗೆ ಹಮ್ಮಿಕೊಂಡಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಜುಲೈ 1 ರಂದು ಜಯಂತಿ ಆಚರಿಸಲು ನಿರ್ಧರಿಸಲಾಗಿದೆ. ಅಂದು ಬೆಳಗ್ಗೆ 9.30ಕ್ಕೆ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ನಾಮ ಫಲಕವಿರುವ ಯಗಚಿ ಸೇತುವೆ ಸಮೀಪದಿಂದ 108 ಕುಂಭದೊಂದಿಗೆ ಡಿಜೆ ವಾದ್ಯತಂಡ ಮತ್ತು ಮಲೆನಾಡಿನ ಸುಗ್ಗಿಮೇಳ ವಾದ್ಯದೊಂದಿಗೆ ಮೆರವಣಿಗೆ ಚಾಲನೆ ಪಡೆಯಲಿದೆ. ಹಾಸನ ಆದು ಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮತ್ತು ಅತಿಥಿಗಳನ್ನು ಮೆರವಣಿಗೆ ಮೂಲಕ ಕೆಂಪೇಗೌಡ ವೃತ್ತಕ್ಕೆ ಕರೆತಂದು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿಸಲಾಗುವುದು.
    ನಂತರ ಒಕ್ಕಲಿಗರ ಸಮುದಾಯ ಭವನದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ, ಕೃಷಿಕರಿಗೆ ಸನ್ಮಾನ, ಬೃಹತ್ ರಕ್ತದಾನ ಶಿಬಿರ, ಸ್ವಾಮೀಜಿ ಆಶೀರ್ವಚನ, ಅನ್ನ ದಾಸೋಹ ನೆರವೇರಲಿದೆ ಎಂದು ವಿವರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net