ವೈಜ್ಞಾನಿಕ ಚಿಕಿತ್ಸೆಯಿಂದ ಬಂಜೆತನ ನಿವಾರಣೆ ಸಾಧ್ಯ

24blrp2
Published on

ಬೇಲೂರು: ವೈಜ್ಞಾನಿಕ ಚಿಕಿತ್ಸೆಯಿಂದ ಬಂಜೆತನ ನಿವಾರಣೆ ಸಾಧ್ಯ ಎಂದು ತಜ್ಞೆ ಡಾ.ಕೆ.ವಿ. ಕಾವ್ಯಾ ಹೇಳಿದರು.
ಲಯನ್ಸ್ ಸಂಸ್ಥೆ ಹಾಗೂ ಕಾವೇರಿ ಕ್ಲಿನಿಕ್ ಸಹಯೋಗದೊಂದಿಗೆ ಪಟ್ಟಣದ ಕಾವೇರಿ ಕ್ಲಿನಿಕ್ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಫಲವತ್ತತೆ ಪರಿಶೀಲನಾ ಶಿಬಿರ ಹಾಗೂ ಬಂಜೆತನ ಸಮಾಲೋಚನಾ ಉಚಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅನೇಕ ದಂಪತಿಗೆ ಸಂತಾನವಾಗದಿರಲು ಆಂತರಿಕ ಸಮಸ್ಯೆಗಳು ಇರುತ್ತವೆ. ಬಂಜೆತನ ಸಂಬಂಧಿತ ಸಮಸ್ಯೆಗಳಿದ್ದವರಿಗೆ ಸೂಕ್ತ ಸಲಹೆ ನೀಡುವುದು ಶಿಬಿರದ ಉದ್ದೇಶ. ಏನೇ ಸಮಸ್ಯೆ ಇದ್ದರೂ ಆಧುನಿಕ ವೈಜ್ಞಾನಿಕ ಯುಗದಲ್ಲಿ ಸ್ತ್ರೀ, ಪುರುಷರಿಗೆ ಸಂತಾನ ಪಡೆಯಲು ಹಲವು ಅವಕಾಶಗಳಿವೆ. ಆದರೆ ಮೂಢ ನಂಬಿಕೆಗಳಿಂದ ಜನರು ಹೊರಬಂದರೆ ಸಮಸ್ಯೆಗೆ ಪರಿಹಾರ ಸುಲಭ ಎಂದರು. ಕಾವೇರಿ ಕ್ಲಿನಿಕ್‌ನ ತಜ್ಞ ಡಾ.ಚಂದ್ರಮೌಳಿ ಮಾತನಾಡಿ, ಬಂಜೆತನ ಸಮಾಲೋಚನಾ ಕಾರ್ಯಕ್ರಮದಲ್ಲಿ ಕಳೆದ ವರ್ಷ 112 ಜನ ಭಾಗವಹಿಸಿ ಮಾಹಿತಿ ಪಡೆದಿದ್ದರು. ಅದರಲ್ಲಿ ಸಮಸ್ಯೆ ಇದ್ದ 5 ದಂಪತಿಗೆ ಸಂತಾನವಾಗುವ ಲಕ್ಷಣ ಕಂಡುಬಂದಿದೆ. ಪ್ರತಿ ವರ್ಷವೂ ಈ ರೀತಿಯ ಶಿಬಿರ ಆಯೋಜನೆ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net