ದೇವರ ಚಿನ್ನಾಭರಣಗಳ ಪಲ್ಲಕ್ಕಿ ಉತ್ಸವ

29blrp5.
Published on

ಬೇಲೂರು : ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಚನ್ನಕೇಶವಸ್ವಾಮಿ ಹಾಗೂ ಶ್ರೀದೇವಿ-ಭೂದೇವಿ ಅಮ್ಮನವರಿಗೆ ತೊಡಿಸುವ ಚಿನ್ನದ ಆಭರಣಗಳನ್ನು ತಾಲೂಕು ಕಚೇರಿ ಖಜಾನೆಯಿಂದ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ದೇಗುಲ ಆಡಳಿತ ಮಂಡಳಿ ಹಾಗೂ ಭಕ್ತರ ಸಮ್ಮುಖದಲ್ಲಿ ಶನಿವಾರ ಪಲ್ಲಕ್ಕಿಯಲ್ಲಿ ಸನ್ನಿಧಿಗೆ ತರಲಾಯಿತು. ತಾಲೂಕು ಕಚೇರಿಯ ಖಜಾನೆಯಲ್ಲಿದ್ದ ಶ್ರೀ ಚನ್ನಕೇಶವಸ್ವಾಮಿ ಹಾಗೂ ಶ್ರೀದೇವಿ-ಭೂದೇವಿ ಅಮ್ಮನವರ ಆಭರಣಗಳಿದ್ದ ಪೆಟ್ಟಿಗೆಗೆ ತಹಶಿಲ್ದಾರ್ ಎಂ.ಮಮತಾ, ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್, ದೇವಾಲಯದ ಪ್ರಧಾನ ಅರ್ಚಕ ಕೃಷ್ಣಸ್ವಾಮಿ ಭಟ್ಟರ್ ಹಾಗೂ ನರಸಿಂಹಪ್ರಿಯ ಭಟ್ಟರ್ ಸಮ್ಮುಖದಲ್ಲಿ ತಂದು, ಪೊಲಿಸ್ ಬಿಗಿ ಭದ್ರತೆಯೊಂದಿಗೆ ದೇವರ ಆಭರಣಗಳಿಗೆ ಪೂಜೆ ಸಲ್ಲಿಸಿ ದೇಗುಲಕ್ಕೆ ಅಡ್ಡ ಪಲ್ಲಕ್ಕಿಯಲ್ಲಿ ತರಲಾಯಿತು.

ದೇಗುಲದ ಆಡಳಿತಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಮತ್ತು ಇಒ ಯೋಗೀಶ್ ನೇತೃತ್ವದಲ್ಲಿ ಚಿನ್ನದ ಆಭರಣಗಳನ್ನು ಪರಿಶೀಲಿಸಿದ ನಂತರ ದೇಗುಲದಲ್ಲಿ ಅರ್ಚಕರು ಹಾಗೂ ಆಡಳಿತ ಮಂಡಳಿಯ ಸುಪರ್ದಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಮಾತನಾಡಿದ ದೇಗುಲದ ಆಡಳಿತಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಯುಗಾದಿ ಹಬ್ಬದ ದಿನ ಚನ್ನಕೇಶವಸ್ವಾಮಿ ಮತು ಅಮ್ಮನವ ಆಲಯ ಶುದ್ದಿ, ಪಂಚಾಮೃತ ಅಭಿಷೇಕದ ನಂತರ ಬಂಗಾರದ ಆಭರಣಗಳನ್ನು ತೊಡಿಸಿ ಅಲಂಕರಿಸಲಾಗುವುದು. ಏ. 2ರಿಂದ 15ರ ವರೆಗೆ

ದೇವರ ವಿವಿಧ ಉತ್ಸವಗಳು ನಡೆಯಲಿವೆ. ಏ.10 ಮತ್ತು 11 ರಂದು ದಿವ್ಯ ರಥೋತ್ಸವ ಹಾಗೂ ನಾಡ ರಥೋತ್ಸವ ಸಂಪನ್ನಗೊಳ್ಳಲಿದೆ ಎಂದು ವಿವರಿಸಿದರು. ದೇಗುಲದ ಇಒ ಯೋಗೀಶ್. ಅಡೆಗಾರರಾದ ಶೈಲೇಶ್, ಪ್ರಮೋದ್, ವೆಂಕಟೇಶ್, ಗಜೇಂದ್ರ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net