ಮಹನೀಯರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಿ

19blrp1
Published on

 ತಹಸೀಲ್ದಾರ್ ಎಂ.ಮಮತಾ ಸಲಹೆ

 ಬೇಲೂರು : ಏನೇ ಕಷ್ಟ ಎದುರಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉನ್ನತ ಸ್ಥಾನಮಾನ ಪಡೆದು ದೇಶದ ಆಸ್ತಿಯನ್ನಾಗಿಸಲು ಪಾಲಕರು ಮುಂದಾಗಬೇಕು ಎಂದು ತಹಸೀಲ್ದಾರ್ ಎಂ.ಮಮತಾ ಹೇಳಿದರು. ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಆಯೋಜಿಸಿದ್ದ ಸಂತ ಸೇವಾಲಾಲ್, ಛತ್ರಪತಿ ಶಿವಾಜಿ ಹಾಗೂ ಸಂತ ಕವಿ ಸರ್ವಜ್ಞರ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಭಾರತೀಯರ ಕಲ್ಪನೆಗೆ ಅರ್ಥ ತಂದ ವ್ಯಕ್ತಿಯಾಗಿದ್ದಾರೆ. ತಮಗೆ ಸಿಕ್ಕ ಸ್ವಲ್ಪ ಅವಧಿಯಲ್ಲೆ ದೇಶವನ್ನೆಲ್ಲ ಸಂಚರಿಸಿ ಸಾಮ್ರಾಜ್ಯ ಕಟ್ಟಿದ ಮಹಾನ್ ಪರಾಕ್ರಮಿ. ಶಿವಾಜಿಯವರು ಸೈನ್ಯದ ಸಂಘಟನೆಯಲ್ಲಿ ಚತುರರಾಗಿದ್ದರು. ಅವರ ಸೈನ್ಯದಲ್ಲಿ ಎಲ್ಲ ಜಾತಿ ಧರ್ಮದವರಿದ್ದರು. ಅವರೆಂದಿಗೂ ಒಂದು ಜಾತಿಗೆ ಅಂಟಿಕೊಂಡವರಲ್ಲ ಎಂದರು.

ಸಂತ ಸೇವಾಲಾಲ್ ಮಹಾರಾಜರ ತತ್ವಾದರ್ಶಗಳು ನಮ್ಮ ನಿತ್ಯದ ಬದುಕಿಗೆ ಮಾರ್ಗದರ್ಶಕಗಳಾಗಿವೆ. ಅವುಗಳನ್ನು ಅಳವಡಿಸಿಕೊಂಡು ನಮ್ಮ ಬದುಕನ್ನು ಬಂಗಾರ ಮಾಡಿಕೊಳ್ಳಬೇಕಾಗಿದೆ ಎಂದರು.

ಪೊಲೀಸ್ ಇನ್ಸ್‌ಪೆಕ್ಟರ್ ರೇವಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಪುರಸಭೆ ಮುಖ್ಯಾಧಿಕಾರಿ ಸುಜಯ್, ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಜಿಲ್ಲಾ ಕಾರ್ಯದರ್ಶಿ ಶಿವಾಜಿ, ಚಂದ್ರನಾಯಕ್, ಮುಖಂಡರಾದ ನಲವಾಡಿ, ಶಿವಪ್ಪ, ರಾಜಮಲ್ಲನಾಯಕ್ ಹಾಗೂ ಸಮಾಜದ ಮುಖಂಡರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net