ಬೇಲೂರಿನಲ್ಲಿ ಶ್ರೀ ರಾಮನವಮಿ ಸಂಭ್ರಮ

6blrp1.
Published on

  ಬೇಲೂರು : ಶ್ರೀ ರಾಮನವಮಿ ಅಂಗವಾಗಿ ಪಟ್ಟಣದ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೇಯರ ಪೂರ್ತಿಗಳಿಗೆ ವಿಶೇಷ ಅಭಿಷೇಕ, ಪೂಜೆ ಪುನಸ್ಕಾರಗಳನ್ನು ನೆರವೇರಿಸಿ ನೆರೆದಿದ್ದ ಭಕ್ತರಿಗೆ ಪಾನಕ ಮಜಿಗೆ, ಕೋಸಂಬರಿ, ಅವಲಕ್ಕಿ, ಲಾಡು ಪ್ರಸಾದ ವಿತರಿಸಲಾಯಿತು.

ಶ್ರೀ ರಾಮನವಮಿಗಾಗಿ ಮುಂಜಾನೆಯಿಂದಲೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಾಮ ಸ್ಮರಣೆಯೊಂದಿಗೆ ರಾಮ, ಸೀತೆ, ಲಕ್ಷ್ಮಣ, ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ಇದೇ ಸಂದರ್ಭ ಅರ್ಚಕರು ದೇವರಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಪವಮಾನ, ಶ್ರೀಸೂಕ್ತ ಮತ್ತು ಪುರಷ ಸೂಕ್ತಗಳೊಂದಿಗೆ ಮಹಾ ಮಂಗಳಾರತಿ ನೆರವೇರಿಸಿ ಭಕ್ತರು ಪ್ರಸಾದ ವಿತರಿಸಿದರು.

ಶ್ರೀ ಸೀತಾರಾಮಾಂಜನೇಯ ದೇಗುಲದ ಭಜನಾ ಮಂಡಳಿ ಮುಖಂಡ ವಾಸುದೇವ ಧನ್ಯ ಮಾತನಾಡಿ, ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಆಂಜನೇಯಸ್ವಾಮಿ ದೇಗುಲದಲ್ಲಿ ಕಳೆದ 52 ವರ್ಷಗಳಿಂದ ಶ್ರೀ ರಾಮನವಮಿ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ರಾಮ ನವಮಿ ಅಂಗವಾಗಿ 14 ದಿನಗಳ ಕಾಲ ದೇವರ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ರಾಮತಾರಕ ಪೂಜೆ, ಸಂಜೆ ಭಜನಾಕಾರ್ಯಕ್ರಮ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಶ್ರೀರಾಮನಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ರಾಮನ ಪಟ್ಟಾಭಿಷೇಕ ಮಾಡಲಾಗಿದೆ. ಬಾಲ ರಾಮನ ತೊಟ್ಟಿಲು ಪೂಜೆ ನಡೆಸಲಾಗಿದೆ. ಭಕ್ತರು ಕೈಯಲ್ಲಿ ತೊಟ್ಟಿಲು ತೂಗಿ ಪೂಜೆಸಲ್ಲಿಸಲು ಅವಕಾಶ ನೀಡಲಾಗಿದೆ. ಇದೇ 12 ನೇ ತಾರೀಕಿನಂದು ವಿಶೇಷವಾಗಿ ರಾಮನಿಗೆ ಪಟ್ಟಾಭಿಷೇಕ ಮಹೋತ್ಸವವು ನಡೆಯಲಿದ್ದು, ಅಂದೇ ಸಂಜೆ ಶ್ರೀರಾಮನ ಉತ್ಸವದೊಂದಿಗೆ ಪಟ್ಟಣದಲ್ಲಿ ಶೋಭಯಾತ್ರೆ ಜರುಗಲಿದ್ದು, ಹತ್ವಾರ್ ಕುಟುಂಭ ಹಾಗೂ ಭಕ್ತರ ಸಹಕಾರದೊಂದಿಗೆ ಎಲ್ಲ ಕಾರ್ಯಕ್ರಮಗಳು ಜರುಗಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಿಳಿಸಿದರು.

ಶ್ರೀ ಸೀತಾರಾಮಾಂಜನೇಯ ದೇಗುಲದ ಧರ್ಮದರ್ಶಿ ಮುರುಳಿ ಹತ್ವಾರ್, ರಾಘವೇಂದ್ರ ಹತ್ವಾರ್, ಅರ್ಚಕರಾದ ನಂಜುಂಡಸ್ವಾಮಿ, ಮುರುಳಿ, ದೇಗುಲದ ರಘುಪತಿ ಹತ್ವಾರ್, ಮಧ್ವ ಪತಿ ಭಜನಾ ಮಂಡಳಿ ಕಾರ್ಯದರ್ಶಿ ಭಾರತಿ ಧನ್ಯ, ಗಾಯತ್ರಿ, ಮೀರ ಅರಸ್, ಶ್ರೀನಿಧಿ, ಸುಬ್ರಹ್ಮಣ್ಯ ಸೇರಿದಂತೆ ಭಕ್ತರಿದ್ದರು.

ಚಿತ್ರ:6(ಬಿಎಲ್‌ಆರ್)1-ಶ್ರೀರಾಮನವಮಿ ಅಂಗವಾಗಿ ಪಟ್ಟಣದ ಶ್ರೀ ಸೀತಾರಾಮಾಂಜನೇಯ ದೇಗುಲದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾ ಮಾತೆಯರನ್ನು ಪೂಜಿಸಿರುವುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net