

ಬೇಲೂರು : ಯಾವುದೇ ಸ್ವಾರ್ಥವಿಲ್ಲದೆ ನಾಡಿನ ಒಳಿತಿಗಾಗಿ ಬೆಂಗಳೂರು ಕಟ್ಟಿದ ಕೆಂಪೇಗೌಡರ ಆದರ್ಶ ನಮಗೆಲ್ಲಾ ಮಾದರಿ
ಎಂದು ಶಾಸಕ ಎಚ್.ಕೆ. ಸುರೇಶ್ ಹೇಳಿದರು. ರಾಷ್ಟ್ರೀಯ ಹಬ್ವಗಳ ಆಚರಣಾ ಸಮಿತಿಯಿಂದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ 515 ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಕೆಂಪೇಗೌಡ ಒಂದು ಜಾತಿ, ವರ್ಗಕ್ಕೆ ಸೀಮಿತವಲ್ಲ. ಒಕ್ಕಲುತನ ಮಾಡುವ ಎಲ್ಲ ಸಮುದಾಯಕ್ಕೆ ಸೇರಿದ ನಾಯಕರಾದರೂ ನಾಡಪ್ರಭುವಾಗಿದ್ದು ಮಹತ್ವದ ಸಂಗತಿ ಎಂದರು.
ಕೆಂಪೇಗೌಡರ ಆದರ್ಶಗಳನ್ನು ಅಳವಡಿಸಿಕೊಂಡರೆ ಭ್ರಷ್ಟಾಚಾರ ರಹಿತ ಸಮಾಜ ನಿರ್ಮಿಸಲು ಸಾಧ್ಯವಿದೆ ಎಂಧರು. ಜುಲೈ 1 ರಂದು ಬೇಲೂರಿನಲ್ಲಿ ನಮ್ಮ ಒಕ್ಕಲಿಗ ಸಂಘಟನೆಗಳು ಅದ್ದೂರಿಯಾಗಿ ಕೆಂಪೇಗೌಡ ಜಯಂತಿ ಆಚರಿಸಲು ತೀರ್ಮಾನಿಸಿದ್ದು, ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.