ತಳ ಸಮುದಾಯದ ಪ್ರಗತಿಗೆ ಕಾನ್ಷಿರಾಂ ಕೊಡುಗೆ

19blrp2
Published on

ಬೇಲೂರು : ದೇಶದ ಶೋಷಿತ ಸಮುದಾಯಗಳಿಗೆ ಕಾನ್ಷಿರಾಂ ಧ್ವನಿಯಾಗಿ ನಿಂತ ಅಗ್ರಪಂಕ್ತಿ ನಾಯಕರಾಗಿದ್ದರು ಎಂದು
ವಿದ್ಯಾ ವಿಕಾಸ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಎಂ.ಎಂ.ರಮೇಶ್ ಹೇಳಿದರು.ಪಟ್ಟಣದ ನೆಹರು ನಗರದಲ್ಲಿರುವ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಎಸ್ಪಿ ನಾಯಕ ಕಾನ್ಷಿರಾಂ ಅವರ 90 ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.ದೇಶದಲ್ಲಿ ಶೋಷಣೆ ಹಾಗೂ ತುಳಿತಕ್ಕೊಳಗಾದ ಸಮುದಾಯಗಳಿಗೆ ರಾಜಕೀಯ ಪ್ರಜ್ಞೆ ಮೂಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಕಾನ್ಷಿರಾಂ ಕೊಡುಗೆ ದೊಡ್ಡದು ಎಂದವರು ನುಡಿದರು.
ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಪಕ್ಷವನ್ನು ಅಧಿಕಾರಕ್ಕೆ ತಂದ ಕೀರ್ತಿ ಕಾನ್ಷಿರಾಂ ರವರಿಗೆ ಸಲ್ಲುತ್ತದೆ. ಸಣ್ಣಪುಟ್ಟ ಜನಾಂಗದವರೂ ಸಾಧನೆ ಮಾಡಬಹುದು ಎಂಬುದನ್ನು ಅವರು ತೋರಿಸಿ ಕೊಟ್ಟಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದರೆ ಉತ್ತಮ ಸಾಧನೆಯತ್ತ ಸಾಗಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net