ಆದಿಶಕ್ತಿ ಕೆರೆ ಕೋಡಮ್ಮ ಜಾತ್ರಾ ಮಹೋತ್ಸವ

22blrp5
Published on


ಬೇಲೂರು : ತಾಲೂಕಿನ ಅರೇಹಳ್ಳಿ ಹೋಬಳಿಯ ಹಿರಿಗರ್ಜೆ ಕೊಪ್ಪಲು ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆದ ಆದಿಶಕ್ತಿ ಕೆರೆ ಕೋಡಮ್ಮನವರ ಜಾತ್ರಾ ಮಹೋತ್ಸವಕ್ಕೆ ನೂರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಅದ್ದೂರಿಯಾಗಿ ಮಂಗಳ ಹಾಡಲಾಯಿತು.
ಪೂಜಾ ಮಹೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಗಿತ್ತು. ಗಂಗಾ ಪೂಜೆ, ಆದಿಶಕ್ತಿ ಕೆರೆಕೋಡಮ್ಮನವರ ರಾತ್ರಿ ಉತ್ಸವ ಏರ್ಪಡಿಸಲಾತ್ತು. ಭಾನುವಾರ ಅಮ್ಮನವರು ಬನಕ್ಕೆ ಹೊರಡುವುದು, ಗಂಗಾ ಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ ಹಾಗೂ ಹಗಲು ಉತ್ಸವ ನೆರವೇರಿತು.
ಸೋಮವಾರ ಶ್ರೀ ಹವಳಪ್ಪ ಸ್ವಾಮಿಯವರಿಗೆ ಹಾಗೂ ಚಿಕ್ಕಮ್ಮನವರಿಗೆ ಅಮ್ಮನ ಬನದಲ್ಲಿ ಕವಳ ಕಾರ್ಯಕ್ರಮ ನಡೆಯಿತು. ಈ ಪೂಜಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿ ಧನ್ಯತೆ ಮೆರೆದರು. ಎಲ್ಲ ಭಕ್ತರಿಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಶ್ರೀ ಆದಿಶಕ್ತಿ ಕೆರೆಕೋಡಮ್ಮ ಸೇವಾ ಸಮಿತಿ ಅಧ್ಯಕ್ಷ ಗೋಪಾಲ್, ಕಾರ್ಯದರ್ಶಿ ದಿನೇಶ್, ಮುಖಂಡರಾದ ಮಂಜುನಾಥ್, ದಿನೇಶ್, ಚಂದ್ರಯ್ಯ, ಕಾರ್ತಿಕ್, ಅರ್ಚಕ ವೀರಭದ್ರ ಮತ್ತು ಸಮಿತಿ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net