ಬಹ್ರೇನ್‌ನಲ್ಲಿ ಬೆಳ್ತಂಗಡಿ ನಿವಾಸಿ ಸಾವು, ಪತ್ನಿ ಜತೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗಲೇ ಹೃದಯಾಘಾತ

DEATH__ WEB
Published on

ಬೆಳ್ತಂಗಡಿ: ಪತ್ನಿ ಜತೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ಬೆಳ್ತಂಗಡಿ ಮೂಲದ ಇಬ್ರಾಹಿಂ ನಾವೂರು(34) ಎಂಬುವರು ಬಹರೇನ್‌ನಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ. ಇಬ್ರಾಹಿಂ ಒಂದೂವರೆ ವಷರ್ದ ಹಿಂದೆ ಸುನ್ನತ್‌ಕೆರೆ ಎಂಬಲ್ಲಿಯ ಯುವತಿಯನ್ನು ವಿವಾಹವಾಗಿದ್ದರು. ದಂಪತಿಗೆ ಪುಟ್ಟ ಮಗು ಇದೆ. ಶುಕ್ರವಾರ ರಾತ್ರಿ ಹೃದಯಾಘಾತವಾಗಿ ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರು ಪರೀಕ್ಷಿಸಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net